ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನ್‌ 30ರಿಂದ 'ಮನ್ ಕಿ ಬಾತ್' ಪುನರಾರಂಭ: ಪ್ರಧಾನಿ ಮೋದಿ

Published 18 ಜೂನ್ 2024, 10:15 IST
Last Updated 18 ಜೂನ್ 2024, 10:15 IST
ಅಕ್ಷರ ಗಾತ್ರ

ನವದೆಹಲಿ: 'ಮನ್ ಕಿ ಬಾತ್' ಮಾಸಿಕ ರೇಡಿಯೊ ಕಾರ್ಯಕ್ರಮ ಮತ್ತೆ ಪುನರಾರಂಭಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕಾರ್ಯಕ್ರಮ ಜೂನ್‌ 30ರಿಂದ ಪುನರಾರಂಭವಾಗಲಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮೋದಿ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಆಲೋಚನೆಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ. 

ಚುನಾವಣೆ ಕಾರಣದಿಂದಾಗಿ ಕೆಲವು ತಿಂಗಳುಗಳ ನಂತರ #MannKiBaat ಮತ್ತೆ ಬಂದಿದೆ ಎಂದು ಹೇಳಲು ಸಂತೋಷವಾಗಿದೆ! ಈ ತಿಂಗಳ ಕಾರ್ಯಕ್ರಮವು ಜೂನ್ 30ರ ಭಾನುವಾರದಂದು ಬರಲಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮ ಫೆಬ್ರವರಿ 25ರಂದು ಕಡೆಯದಾಗಿ ಪ್ರಸಾರವಾಗಿತ್ತು. ಇದು 110ನೇ ಸಂಚಿಕೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ದಾಖಲೆಯ ಸಂಖ್ಯೆಯಲ್ಲಿ ಹಾಗೂ ದೇಶದ ಹಿತಕ್ಕಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದರು. ಇದರ ಬಳಿಕ 'ಮನ್ ಕಿ ಬಾತ್' ಪ್ರಸಾರವಾಗಿರಲಿಲ್ಲ.

ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT