ನವದೆಹಲಿ: ದಿನಪತ್ರಿಕೆ ಪ್ರಕಟವಾದ 48 ಗಂಟೆಗಳೊಳಗೆ ಪ್ರಕಾಶಕರು ಅದರ ಇ– ಆವೃತ್ತಿಯನ್ನು ‘ಪ್ರೆಸ್ ಸೇವಾ ಪೋರ್ಟಲ್’ಗೆ ಅಪ್ಲೋಡ್ ಮಾಡಬೇಕು ಎಂದು ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ನಿಯಮ 2024ರ ಕರಡು ಪ್ರತಿಯಲ್ಲಿ ಹೇಳಲಾಗಿದೆ.

ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಪತ್ರಿಕೆಯ ಹಿಂದಿನ ತಿಂಗಳ ಮುದ್ರಿತ ಪ್ರತಿಗಳನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯುರೊದ (ಪಿಐಬಿ) ರಾಜ್ಯ ಕಚೇರಿಗಳಿಗೆ ಸಲ್ಲಿಸಬೇಕು ಎಂದೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿರುವ ಕರಡು ನಿಯಮಗಳಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಚೇರಿಗೂ ಪತ್ರಿಕೆಯ ಮುದ್ರಿತ ಪ್ರತಿಗಳನ್ನು ಸಲ್ಲಿಸಬೇಕು ಎಂದಿದೆ. ನಿಗದಿತ ಅವಧಿಯಲ್ಲಿ ಪತ್ರಿಕೆಯು ಮುದ್ರಣಗೊಳ್ಳದಿದ್ದರೆ ಅದು ನೋಂದಣಿ ರದ್ದುಗೊಳ್ಳಲಿದೆ ಎಂದೂ ಹೇಳಲಾಗಿದೆ.

ಫೆಬ್ರುವರಿ 4ರ ವರೆಗೆ ಈ ಕುರಿತು ಸಾರ್ವಜನಿಕರ ಸಮಾಲೋಚನೆಗೆ ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.