ನವದೆಹಲಿ:ಖಾಸಗಿ ಎಫ್.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.

‘ಈ ಕ್ರಮದಿಂದ ಪ್ರಜೆಗಳಲ್ಲಿ ಜಾಗೃತಿ ಮೂಡಲಿದೆ. ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಬೇರೇನು ಬೇಕು? ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಬಲೀಕರಣಗೊಳಿಸಲು ಸಾಧ್ಯವಾಗಬೇಕು’ ಎಂದು ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.

‘ಖಾಸಗಿ ಎಫ್.ಎಂ ವಾಹಿನಿಗಳು ಆಕಾಶವಾಣಿಯ ಸುದ್ದಿಯನ್ನು ಯಥಾವತ್ತಾಗಿ ಬಳಸಬೇಕು. ಸುದ್ದಿ ಮಧ್ಯೆ ಪ್ರಸಾರವಾಗುವ ಜಾಹೀರಾತುಗಳನ್ನು ಸಹ ಎಫ್.ಎಂ ವಾಹಿನಿಗಳು ಬಳಸಿಕೊಳ್ಳಬೇಕು. ಸುದ್ದಿಯ ಮೂಲ ಆಕಾಶವಾಣಿ ಎಂದು ಉಲ್ಲೇಖಿಸಬೇಕು.ಪ್ರಾಯೋಗಿಕ ಅವಧಿಗೆ ಮೇ 31ರಿಂದ ಉಚಿತವಾಗಿ ಈ ಸೇವೆ ಲಭ್ಯವಾಗಲಿದೆ. ಆದರೆ ಈ ಅವಧಿಯಲ್ಲಿ ನಕ್ಸಲ್ಪೀಡಿತ ಪ್ರದೇಶಗಳು ಹಾಗೂ ಅಶಾಂತಿಯಿರುವ ಗಡಿಭಾಗಗಳಲ್ಲಿ ಸುದ್ದಿ ಪ್ರಸಾರ ಮಾಡಬಾರದು’ ಎಂದು ನಿಯಮ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.