ವಯನಾಡ್(ಕೇರಳ): ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಇಂದಿನಿಂದ ಎರಡು ದಿನ ವಯನಾಡ್ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು.

ಪ್ರಿಯಾಂಕಾ ಅವರ ಪ್ರಚಾರವು ನೀಲಗಿರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂದಿನಿಂದ ಪ್ರಾರಂಭವಾಗಲಿದ್ದು, ಬೆಳಿಗ್ಗೆ 11.20ರ ಸುಮಾರಿಗೆ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

‘ಅವರ ಮೊದಲ ಸಾರ್ವಜನಿಕ ಸಭೆ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಮೀನಂಗಡಿಯಲ್ಲಿ ನಡೆಯಲಿದ್ದು, ನಂತರ ಮಧ್ಯಾಹ್ನ 2.30ಕ್ಕೆ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ಪನಮರಮ್ನಲ್ಲಿ ನಡೆಯಲಿದೆ. ಸಂಜೆ 4.30ಕ್ಕೆ ಕಲ್ಪೆಟ್ಟಾ ವಿಧಾನಸಭಾ ಕ್ಷೇತ್ರದ ಪೊಝುತಾನದಲ್ಲಿ ಸಭೆ ನಡೆಸುವ ಮೂಲಕ ಅವರು ತಮ್ಮ ದಿನವನ್ನು ಮುಕ್ತಾಯಗೊಳಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಮಂಗಳವಾರ ತಿರುವಂಬಾಡಿ, ಎಂಗಪುಳ, ಏರನಾಡ್ , ತೇರಟ್ಟಮ್ಮಾಳ್ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಸೇರಿದಂತೆ ಇತರ ಪ್ರಮುಖ ನಾಯಕರು ಪ್ರಿಯಾಂಕ ಅವರಿಗೆ ಸಾಥ್ ನೀಡಲಿದ್ದಾರೆ.

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ಕ್ಕೆ ಉಪಚುನಾವಣೆ ನಡೆಯಲಿದೆ. ನ.23ಕ್ಕೆ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.