ನವದೆಹಲಿ:‘ಸೇನಾ ಪಡೆಗಳಿಗೆ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಆಕಾಂಕ್ಷಿಗಳ ಕಠಿಣ ಶ್ರಮವನ್ನು ಗೌರವಿಸಬೇಕಿದ್ದು, ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ‘ಸೇನೆಗೆ ಸೇರಲು ಆಸಕ್ತರಾಗಿರುವ ಲಕ್ಷಾಂತರ ಅಭ್ಯರ್ಥಿಗಳು ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆ ಅನಗತ್ಯವಾಗಿ ವಿಳಂಬವಾಗಿದೆ’ ಎಂದಿದ್ದಾರೆ.

ನೇಮಕಾತಿ ಪ್ರಕ್ರಿಯೆಯ ತೊಡಕುಗಳನ್ನು ಪಟ್ಟಿ ಮಾಡಿರುವ ಅವರು, ವಾಯುಪಡೆಗೆ ನೇಮಕಾತಿಗಾಗಿ 2020ರ ನವೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು. ಫಲಿತಾಂಶ ಪ್ರಕಟವಾಗಿ ಇತರೆ ಪರೀಕ್ಷೆಗಳೂ ಆಗಿವೆ. ಆದರೆ, ಇನ್ನೂ ಆಯ್ಕೆ ಪಟ್ಟಿ ಪ್ರಕಟವಾಗಿಲ್ಲ ಎಂದಿದ್ದಾರೆ.

ವಾಯುಪಡೆಯ ಯೋಧರ ನೇಮಕಾತಿಗೆ ಜುಲೈ 2021ರಲ್ಲಿ ಪರೀಕ್ಷೆ ನಡೆದಿದೆ. ಆದಷ್ಟು ಶೀಘ್ರ ಫಲಿತಾಂಶವನ್ನು ಪ್ರಕಟಿಸಿ, ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.