ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಧಿಕೃತ ಕಟ್ಟಡ: ಪೂಜಾ ಖೇಡ್ಕರ್‌ ತಾಯಿಗೆ ನೋಟಿಸ್‌

Published : 13 ಜುಲೈ 2024, 16:14 IST
Last Updated : 13 ಜುಲೈ 2024, 16:14 IST
ಫಾಲೋ ಮಾಡಿ
Comments

ಪುಣೆ: ವಿವಾದಿತ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರ ತಾಯಿ ಮನೋರಮಾ ಖೇಡ್ಕರ್‌ ಅವರಿಗೆ ಪುಣೆ ಮಹಾನಗರ ಪಾಲಿಕೆಯು ಶನಿವಾರ ನೋಟಿಸ್ ಜಾರಿ ಮಾಡಿದ್ದು ಮನೋರಮಾ ಅವರ ಬಂಗಲೆಯ ಸುತ್ತ ಗೋಡೆಗೆ ಹೊಂದಿಕೊಂಡಿರುವ ಅನಧಿಕೃತ ಕಟ್ಟಡವನ್ನು ಏಳು ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಪಾಲಿಕೆ ಅಧಿಕಾರಿಗಳು ನೋಟಿಸ್‌ ನೀಡಲು ‘ಓಂ ದೀಪ್‌’ ಬಂಗಲೆಗೆ ತೆರಳಿದ್ದರು. ಆದರೆ, ಬಾಗಿಲು ತೆಗೆಯದ ಕಾರಣ ಬಂಗಲೆಯ ಗೋಡೆಗೆ ನೋಟಿಸ್ ಅಂಟಿಸಿದರು’ ಎಂದು ತಿಳಿಸಿದರು.

ಮನೋರಮಾ ಅವರು ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಬಂದೂಕು ಹಿಡಿದು ಕೆಲವರನ್ನು ಬೆದರಿಸುತ್ತಿದ್ದ ವಿಡಿಯೊ ಹರಿದಾಡಿತ್ತು. ಇದರ ಬೆನ್ನಲ್ಲೇ, ಪೂಜಾ ಪೋಷಕರಾದ ಮನೋರಮಾ ಮತ್ತು ದಿಲೀಪ್‌ ಖೇಡ್ಕರ್‌ ಹಾಗೂ ಐವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಹಿಂದುಳಿದ ವರ್ಗದ ಪ್ರಮಾಣಪತ್ರ ಹಾಗೂ ಅಂಗವಿಕಲೆ ಎಂದು ನಕಲಿ ದಾಖಲೆ ಸೃಷ್ಟಿಸಿ  ಐಎಎಸ್‌ ಹುದ್ದೆ ಪಡೆದಿದ್ದಾರೆ ಎಂಬ ಆರೋಪ ಪೂಜಾ ವಿರುದ್ಧ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT