ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರ್ಷಲ್ಸ್ ಆರ್ಟ್ಸ್ ಪ್ರದರ್ಶನದ ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ

Published : 29 ಆಗಸ್ಟ್ 2024, 10:09 IST
Last Updated : 29 ಆಗಸ್ಟ್ 2024, 10:09 IST
ಫಾಲೋ ಮಾಡಿ
Comments

ನವದೆಹಲಿ: ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ಕ್ಯಾಂಪ್‌ ಒಂದರಲ್ಲಿ ತಾವು ‘ಮಾರ್ಷಲ್ ಆರ್ಟ್ಸ್’ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ವಿಡಿಯೊವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶೀಘ್ರವೇ ‘ಭಾರತ್ ಡೋಜೊ ಯಾತ್ರೆ’ ( Bharat Dojo Yatra) ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಮಾರ್ಷಲ್ ಆರ್ಟ್ಸ್ ಕಲಿಸುವ ಶಾಲೆ / ಕೋಣೆಗೆ ‘ಡೊಜೊ’ ಎನ್ನಲಾಗುತ್ತದೆ.

‘ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ನಾವು ಸಾವಿರಾರು ಕಿಲೋಮೀಟರ್‌ ಪ್ರಯಾಣಿಸಿದೆವು. ನಮ್ಮ ಕ್ಯಾಂಪ್‌ನಲ್ಲಿ ‘ಜು–ಜಿಟ್ಸು’ ಅಭ್ಯಾಸ ಮಾಡುವುದು ದಿನಚರಿಯಾಗಿತ್ತು. ಫಿಟ್ ಆಗಿರಲು ಆರಂಭವಾದ ಈ ಅಭ್ಯಾಸ, ಬೇಗನೇ ಸಮೂಹ ಚಟುವಟಿಕೆಯಾಗಿ ಪರಿವರ್ತನೆಯಾಯಿತು. ಜೊತೆಗಿದ್ದ ಯಾತ್ರಿಗಳು ಹಾಗೂ ನಾವು ತಂಗುತ್ತಿದ್ದ ಪ್ರದೇಶದ ಸ್ಥಳೀಯ ವಿದ್ಯಾರ್ಥಿಗಳು ಒಟ್ಟು ಸೇರುತ್ತಿದ್ದರು’ ಎಂದು ರಾಹುಲ್ ಗಾಂಧಿ ವಿಡಿಯೊಗೆ ಹಾಕಿದ ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.

‘ಈ ಯುವ ಮನಸ್ಸುಗಳಿಗೆ ಧ್ಯಾನ, ‘ಜು–ಜಿಟ್ಸು, ಐಕಿಡೋ ಮತ್ತು ಅಹಿಂಸಾತ್ಮಕ ಸಂಘರ್ಷ ಪರಿಹಾರ ತಂತ್ರಗಳ ಸಾಮರಸ್ಯದ ಮಿಶ್ರಣವಾದ ಈ ಸೌಮ್ಯ ಕಲೆಯ ಸೌಂದರ್ಯವನ್ನು ಪರಿಚಯಿಸುವುದು ನಮ್ಮ ಗುರಿಯಾಗಿದೆ’ ಎಂದು ಹೇಳಿದ್ದಾರೆ.

‌‘ಹಿಂಸೆಯನ್ನು ಸೌಮ್ಯತೆಯಾಗಿ ಪರಿವರ್ತಿಸುವ ಮೌಲ್ಯವನ್ನು ಅವರಲ್ಲಿ ತುಂಬುವ ಗುರಿ ನಮ್ಮದು. ಹೆಚ್ಚು ಸಹಾನುಭೂತಿ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸುವ ಸಾಧನವನ್ನು ನಾವು ಅವರಿಗೆ ನೀಡಲಿದ್ದೇವೆ. ಈ ಸೌಮ್ಯ ಕಲೆಯನ್ನು ಅಭ್ಯಾಸ ಮಾಡಲು ಪ್ರೇರೇಪಿಸುವ ಆಶಯದೊಂದಿಗೆ ಶೀಘ್ರವೇ ಭಾರತ ಡೋಜೊ ಯಾತ್ರೆ ಬರಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT