ಚೆನ್ನೈ: ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು 'ರಜನಿ ಮಕ್ಕಳ್ ಮಂದ್ರಮ್' (ಆರ್ಆರ್ಎಂ) ಸಂಘಟನೆಯನ್ನು ಸೋಮವಾರ ವಿಸರ್ಜಿಸಿದ್ದಾರೆ.

ಆರು ತಿಂಗಳ ಹಿಂದೆ ರಾಜಕೀಯದಿಂದ ದೂರ ಉಳಿಯುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಘೋಷಿಸಿದ್ದರು. ಈಗ ಆರ್ಆರ್ಎಂ ಸಂಘಟನೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ರಾಜಕೀಯವನ್ನು ಪ್ರವೇಶಿಸದಿರಲು ರಜನಿ ನಿರ್ಧರಿಸಿದ್ದಾರೆ.

ರಜನಿಕಾಂತ್ ಅವರ ರಾಜಕೀಯ ಪ್ರವೇಶಕ್ಕೆ ಆರ್ಆರ್ಎಂ ಸಂಘಟನೆಯನ್ನು ವೇದಿಕೆಯನ್ನಾಗಿ ರೂಪಿಸಲಾಗಿತ್ತು. ಆದರೆ ಕಳೆದ ಡಿಸೆಂಬರ್ನಲ್ಲಿ ರಜನಿ, ಆರೋಗ್ಯದ ಕಾರಣ ನೀಡಿ ‘ರಾಜಕೀಯ ಪ್ರವೇಶಿಸುವುದಿಲ್ಲ‘ ಎಂದು ಘೋಷಿಸಿದ್ದರು.

ಡಿಸೆಂಬರ್3, 2020ರಂದು, ‘ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ‘ ನಟ ರಜನಿಕಾಂತ್ ಪ್ರಕಟಿಸಿದ್ದರು. ನಂತರ ಡಿಸೆಂಬರ್ ಕೊನೆಯ ವಾರದಲ್ಲಿ ಅವರು ಅನಾರೋಗ್ಯದ ಕಾರಣ ನೀಡಿ, ‘ರಾಜಕೀಯ ಪ್ರವೇಶಿಸುವುದಿಲ್ಲ‘ ಎಂದು ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.