‘ಆಭರಣ ವಸ್ತುಗಳ ರಕ್ಷಿಸಿಡಲು 6 ಬೃಹತ್ ಪೆಟ್ಟಿಗೆಗಳು ಸಜ್ಜು’
ಖಜಾನೆಯ ಹೊರ ಕಪಾಟಿನ ಮೂರು ಕೀಗಳು ಲಭ್ಯವಿದೆ. ಒಂದು ಗಜಪತಿ ಮಹಾರಾಜರು ಉಳಿದೆರಡು ದೇಗುಲದ ಆಡಳಿತ ಮತ್ತು ಸೇವಕರ ಬಳಿ ಇವೆ. ‘ಕೀ ಕಾಣೆಯಾಗಿರುವ ಒಂದು ಕಪಾಟಿಗೆ ಹೆಚ್ಚುವರಿ ಬೀಗ ಹಾಕಿ ಮುದ್ರೆ ಹಾಕಲಿದ್ದು ಅದರ ಕೀ ಅನ್ನು ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಜಿಲ್ಲಾ ಖಜಾನೆಯಲ್ಲಿ ಇಡಲಾಗುವುದು’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಅರಬಿಂದಾ ಪಾಧೀ ತಿಳಿಸಿದರು. ಹಿತ್ತಾಳೆ ಒಳ ಆವರಣ ಒಳಗೊಂಡ ಆರು ಮರದ ಪೆಟ್ಟಿಗೆಗಳನ್ನು ದೇವಸ್ಥಾನದ ಆವರಣದಲ್ಲಿ ಸಜ್ಜಾಗಿಡಲಾಗಿದೆ. ಈ ಪೆಟ್ಟಿಗೆಗಳನ್ನು ತೇಗದ ಮರದಿಂದ ಮಾಡಲಾಗಿದ್ದು 4.5 ಅಡಿ ಉದ್ದ 2.5 ಅಡಿ ಎತ್ತರ ಮತ್ತು ಅಗಲ ಇವೆ. ರತ್ನ ಭಂಡಾರ ತೆರೆದ ಬಳಿಕ ಅಲ್ಲಿರುವ ಆಭರಣ ಮೌಲ್ಯಯುತ ವಸ್ತುಗಳನ್ನು ಇವುಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ರತ್ನ ಭಂಡಾರವನ್ನು 1978ರಲ್ಲಿ ತೆರೆಯಲಾಗುತ್ತದೆ. ರತ್ನ ಭಂಡಾರ ತೆರೆಯುವ ವೇಳೆ ಅನುಸರಿಸಬೇಕಾದ ಕ್ರಮಗಳನ್ನು (ಎಸ್‌ಒಪಿ) ಸರ್ಕಾರ ಈಗಾಗಲೇ ಪ್ರಕಟಿಸಿದೆ. ರತ್ನ ಭಂಡಾರದಲ್ಲಿ ಇರುವ ವಸ್ತುಗಳ ವಿವರಗಳನ್ನು ಒಳಗೊಂಡ ಡಿಜಿಟಲ್ ಪಟ್ಟಿಯನ್ನು ಸಿದ್ಧಪಡಿಸಲು ಸರ್ಕಾರ ತೀರ್ಮಾನಿಸಿದೆ. ದುರಸ್ತಿಗೆ ಸಂಬಂಧಿಸಿದಂತೆ ಎಎಸ್‌ಐನ ವಾಸ್ತುಶಿಲ್ಪಿ ತಂತ್ರಜ್ಞರು ಮೆಕ್ಯಾನಿಕಲ್ ಎಂಜಿನಿಯರುಗಳು ಸಿವಿಲ್ ಎಂಜಿನಿಯರ್‌ಗಳು ಪರಿಶೀಲನೆ ನಡೆಸುವರು ಎಂದು ಎಎಸ್‌ಐ ಅಧಿಕಾರಿ ಗದನಾಯಕ್ ಅವರು ತಿಳಿಸಿದರು.