ಪಿಟಿಐ

ನವದೆಹಲಿ: ದೇಶದಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಅಪರಿಚಿತ ಮೂಲಗಳಿಂದ ಬಂದ ಆದಾಯವು 2021–22ರ ಆರ್ಥಿಕ ವರ್ಷದಲ್ಲಿ ₹887.55 ಕೋಟಿಗೆ ಏರಿಕೆಯಾಗಿದೆ. ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಶೇ 76ರಷ್ಟು ಪ್ರಮಾಣವು ಇಂಥ ಅಪರಿಚಿತ ಮೂಲಗಳಿಂದಲೇ ಬಂದವು ಎಂದು ಅಸೋಸಿಯೇಷನ್ ಆಫ್ ಡೆಮೊಕ್ರಟಿಕ್ ರಿಫಾರ್ಮ್ (ಎಡಿಆರ್) ವರದಿ ನೀಡಿದೆ.

2020–21ರಲ್ಲಿ ಈ ಪ್ರಮಾಣವು ಶೇ 49.73ರಷ್ಟಿತ್ತು. ಅಂದರೆ, ಪ್ರಾದೇಶಿಕ ಪಕ್ಷಗಳಿಗೆ ಅಪರಿಚಿತ ಮೂಲಗಳಿಂದ ಬಂದ ಆದಾಯವು ₹263.93 ಕೋಟಿಯಷ್ಟಿತ್ತು.

20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡಿದವರ ವಿವರಗಳು ಲಭ್ಯವಿದೆ. ಈ ವಿವರಗಳನ್ನು ಪ್ರಾದೇಶಿಕ ಪಕ್ಷಗಳೇ ಚುನಾವಣಾ ಆಯೋಗಕ್ಕೆ ನೀಡಿರುತ್ತವೆ. ಅಪರಿಚಿತ ಮೂಲಗಳಿಂದ ಬಂದ ಆದಾಯದ ಲೆಕ್ಕವನ್ನು ಪಕ್ಷಗಳು ತಮ್ಮ ಆಡಿಟ್ ವರದಿಯಲ್ಲಿ ನೀಡಿರುತ್ತವೆ. ಆದರೆ, ಈ ವೇಳೆ ಆ ಆದಾಯದ ಮೂಲವನ್ನು ತಿಳಿಸಿರುವುದಿಲ್ಲ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.