ನವದೆಹಲಿ: ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಬೇರೆಡೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ತಾನು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು ಹೇಳಿದೆ.

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ವಿರುದ್ಧ ವಿಚಾರಣಾ ನ್ಯಾಯಾಲಯವು ಸೋಮವಾರ ದೋಷಾರೋಪ ನಿಗದಿ ಮಾಡಿದೆ. ಕಳೆದ ವಾರ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಅಧಿಕಾರಿಗಳು, ಈ ಪ್ರಕರಣದಲ್ಲಿ ರಾಯ್ ಏಕೈಕ ಮುಖ್ಯ ಆರೋಪಿ ಎಂದು ಹೇಳಿದ್ದಾರೆ.

ತನಿಖೆ ಶುರುವಾದ 90 ದಿನಗಳಲ್ಲಿ ಸಿಬಿಐ ಏನೂ ಮಾಡಿಲ್ಲ. ಅದು ರಾಜ್ಯ ಪೊಲೀಸರು ಹೇಳಿದ್ದನ್ನೇ ಹೇಳಿದೆ ಎಂದು ವಕೀಲರೊಬ್ಬರು ವಿಚಾರಣೆ ಸಂದರ್ಭದಲ್ಲಿ ಪೀಠಕ್ಕೆ ತಿಳಿಸಿದರು. ಸಾಕ್ಷ್ಯ–ಆಧಾರ ಪರಿಶೀಲಿಸಿದ ನಂತರ, ಅಗತ್ಯ ಕಂಡುಬಂದರೆ ಇನ್ನೊಂದು ತನಿಖೆಗೆ ಆದೇಶಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ಅಧಿಕಾರ ಇದೆ ಎಂದು ಪೀಠವು ತಿಳಿಸಿತು.

ಪ್ರಕರಣದ ವಿಚಾರಣೆಯು ಶುರುವಾಗಲಿದೆ, ರಾಜ್ಯದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಬೇರೆಡೆ ವರ್ಗಾಯಿಸಬಹುದು. ಈ ರೀತಿ ಮಾಡಿದ ನಿದರ್ಶನಗಳು ಇವೆ ಎಂದು ಇನ್ನೊಬ್ಬರು ವಕೀಲರು ಹೇಳಿದರು. ಆದರೆ ಈ ಮನವಿಯನ್ನು ಪೀಠವು ಪುರಸ್ಕರಿಸಲಿಲ್ಲ.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, ವಿಚಾರಣೆಯನ್ನು ನಿಲ್ಲಿಸಲು ಯತ್ನವೊಂದು ನಡೆಯುತ್ತಿದೆ ಎಂದು ದೂರಿದರು.

ಸುಪ್ರೀಂ ಕೋರ್ಟ್ನಲ್ಲಿ ಹಾಜರಿದ್ದ ವಕೀಲರೊಬ್ಬರು, ಪಶ್ಚಿಮ ಬಂಗಾಳದ ಜನರು ನ್ಯಾಯಾಂಗ ಮತ್ತು ರಾಜ್ಯದ ಪೊಲೀಸರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದರು. ಈ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಪೀಠವು, ‘ಜನರ ಬಗ್ಗೆ ಮಾತನಾಡಲು ಬರಬೇಡಿ, ನೀವು ಯಾರ ಪರವಾಗಿ ಮಾತನಾಡುತ್ತಿದ್ದೀರಿ? ಇಂತಹ ಬೀಸು ಹೇಳಿಕೆಗಳನ್ನು ನೀಡಬೇಡಿ. ಕ್ಯಾಂಟೀನ್ನಲ್ಲಿ ಕುಳಿತು ಮಾತನಾಡುವ ಗಾಸಿಪ್ಗಳನ್ನು ಕೋರ್ಟ್ನಲ್ಲಿ ಹೇಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.