ಲಖನೌ: ತಕ್ಷಣದಿಂದಲೇ ಜಾರಿ ಬರುವಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಲಾಗಿದೆ ಎಂದು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಅಧ್ಯಕ್ಷ ಜಯಂತ್ ಜೌಧರಿ ಘೋಷಿಸಿದ್ದಾರೆ.

ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ಆದೇಶದ ಮೇರೆಗೆ ರಾಜ್ಯ, ಪ್ರಾದೇಶಿಕ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜಿಸಲಾಗುತ್ತಿದೆ ಎಂದು ಪಕ್ಷದ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಆರ್ಎಲ್ಡಿ ಮಾರ್ಚ್ 21ರಂದು ಪಕ್ಷದ ಶಾಸಕಾಂಗ ಸಭೆಯನ್ನು ಕರೆದಿದೆ.

ಇದನ್ನೂ ಓದಿ:ರಾಹುಲ್ ಗಾಂಧಿ ಭೇಟಿಗಾಗಿ ಪತ್ರ ಬರೆದ ಗುಜರಾತ್ ಕಾಂಗ್ರೆಸ್ ಶಾಸಕರು

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ (ಎಸ್ಪಿ) ಮೈತ್ರಿ ಮಾಡಿಕೊಂಡು ಆರ್ಎಲ್ಡಿ ಸ್ಪರ್ಧೆಗಿಳಿದಿತ್ತು. 2017ರಲ್ಲಿ ಒಂದು ಸ್ಥಾನ ಪಡೆದಿದ್ದ ಪಕ್ಷವು ಈ ಬಾರಿ ಸ್ಪರ್ಧಿಸಿದ್ದ 33 ಕ್ಷೇತ್ರಗಳ ಪೈಕಿ ಎಂಟು ಸ್ಥಾನ ಗೆದ್ದಿತ್ತು.

ಇನ್ನೊಂದೆಡೆ ಸಮಾಜವಾದಿ ಪಕ್ಷವು 2017ರಲ್ಲಿದ್ದ 47 ಸ್ಥಾನಗಳಿಂದ ಈ ಸಲ 111 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.