ಗ್ಯಾಂಗ್ಟಕ್: ಸಿಕ್ಕಿಂನ ಪಂಗೋಲಖಾ ವನ್ಯಜೀವಿ ಅಭಯಾರಣ್ಯದಲ್ಲಿ ರಾಯಲ್ ಬೆಂಗಾಲ್ ಹುಲಿಯೊಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ತಂಡದ ಟ್ರ್ಯಾಪ್ ಕ್ಯಾಮೆರಾದಲ್ಲಿ ರಾಯಲ್ ಬೆಂಗಾಲ್ ಹುಲಿಯ ಚಿತ್ರ ಸೆರೆಯಾಗಿದೆ. ಸಮುದ್ರಮಟ್ಟದಿಂದ 3,640 ಮೀಟರ್ ಎತ್ತರದ ಪ್ರದೇಶದಲ್ಲಿ ಹುಲಿಯೊಂದು ಪತ್ತೆಯಾಗಿರುವುದು ಇದೇ ಮೊದಲು ಎಂಬುದಾಗಿ ಬಿಎನ್ಎಚ್ಎಸ್ ತಿಳಿಸಿದೆ ಎಂದು ಹೇಳಿದ್ದಾರೆ.

ಹುಲಿಯು ಅಭಯಾರಣ್ಯ ಮೂಲಕ ಭೂತಾನ್ನಿಂದ ಉತ್ತರ ಸಿಕ್ಕಿಂ ಅರಣ್ಯಗಳ ಒಳಗೆ ಪ್ರವೇಶಿಸುತ್ತಿದೆ. ಇದಕ್ಕೂ ಮುನ್ನ ಇದೇ ಹುಲಿ ಉತ್ತರ ಸಿಕ್ಕಿಂ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.

ಪಂಗೋಲಖಾ ಅಭಯಾರಣ್ಯವು ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಭೂತಾನ್ ಮಧ್ಯದಲ್ಲಿದೆ. ಇದು ಸುಮಾರು 128 ಚ.ಕಿ.ಮೀ ವ್ಯಾಪಿಸಿದ್ದು, ಸಿಕ್ಕಿಂನಲ್ಲಿರುವ ಅತಿ ದೊಡ್ಡ ವನ್ಯಜೀವಿಧಾಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.