ಮುಂಬೈ:‘ಸ್ವಾರ್ಥ ಒಳ್ಳೆಯದಲ್ಲ. ಇದರಿಂದ ಇಬ್ಬರಿಗೂ ನಷ್ಟವಾಗಲಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಕೆ ನೀಡಿದ್ದಾರೆ.ಶಿವಸೇನಾ ಮತ್ತು ಬಿಜೆಪಿಯನ್ನು ಉದ್ದೇಶಿ ಅವರು ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ.

ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ವಾರ್ಥ ಕೆಟ್ಟದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಅದನ್ನು ತ್ಯಜಿಸುತ್ತಾರೆ ಎಂದು ಬಿಜೆಪಿ, ಶಿವಸೇನಾ ಹೆಸರು ಉಲ್ಲೇಖಿಸದೆ ಹೇಳಿದ್ದಾರೆ.

ಇದನ್ನೂ ಓದಿ:ಮೊಹಮ್ಮದ್ ಘೋರಿಯಂತೆ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ: ಶಿವಸೇನಾ

‘ಒಂದು ವಿಷಯದ ಬಗ್ಗೆ ಹೋರಾಟ ನಡೆಸಿದರೆ ಇಬ್ಬರೂ ನಷ್ಟ ಎದುರಿಸಬೇಕಾಗುತ್ತದೆ ಎಂಬುದು ಎಲ್ಲಿರೂ ತಿಳಿದಿದೆ’ ಎಂದು ಭಾಗವತ್ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಸೆಣಸಿದ್ದ ಬಿಜೆಪಿ–ಶಿವಸೇನಾ ಬಳಿಕ ಅಧಿಕಾರ ಹಂಚಿಕೆ ಬಿಕ್ಕಟ್ಟಿನಿಂದಾಗಿ ಸ್ನೇಹ ಕಡಿದುಕೊಂಡಿವೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 102 ಸ್ಥಾನ ಗೆದ್ದಿದ್ದರೆ ಶಿವಸೇನಾ 56 ಸ್ಥಾನ ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.