ತಿರುವನಂತಪುರ: ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿ ಪಟುಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ತಮಗೆ ಬೆಂಬಲ ಸೂಚಿಸದ ಖ್ಯಾತ ಕ್ರೀಡಾಪುಟುಗಳಾದ ಪಿ.ಟಿ. ಉಷಾ, ಮೇರಿ ಕೋಮ್ ಅವರ ವಿರುದ್ಧ ನಿವೃತ್ತ ಕುಸ್ತಿ ಪಟು ಸಾಕ್ಷಿ ಮಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನನ್ನಂತೆಯೇ ಉಷಾ ಮತ್ತು ಮೇರಿ ಕೋಮ್ ಅವರು ಸ್ಫೂರ್ತಿದಾಯಕ ಕ್ರೀಡಾಪಟುಗಳಾಗಿದ್ದು, ನಮ್ಮ ನೊಂದ ಕುಸ್ತಿಪಟುಗಳ ಕಥೆ ಕೇಳಿಯೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಮಲಿಕ್ ಹೇಳಿದ್ದಾರೆ.

ಕನಕಕುನ್ನುವಿನಲ್ಲಿ ಮಾತೃಭೂಮಿ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ತಮ್ಮ ಪ್ರತಿಭಟನೆ ಕುರಿತಂತೆ ಖ್ಯಾತ ಕ್ರೀಡಾಪಟುಗಳ ಪ್ರತಿಕ್ರಿಯೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಅವರಿಬ್ಬರೂ ನಮ್ಮ ಹೋರಾಟಕ್ಕೆ ಬೆಂಬಲದ ಭರವಸೆ ಕೊಟ್ಟಿದ್ದರು. ಆದರೆ, ಅದಕ್ಕೆ ಪರಿಹಾರ ಕೊಡಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದ್ದಾರೆ.

‘ಪಿ.ಟಿ ಉಷಾ ಮೇಡಂ ನಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಅವರಿಗೆ ನಾವು ಸಂಪೂರ್ಣ ಮಾಹಿತಿ ಕೊಟ್ಟಿದ್ದೆವು. ಆದರೆ, ಅವರಿಂದ ಯಾವುದೇ ಬೆಂಬಲ ಸಿಗಲಿಲ್ಲ. ನಮಗೆ ಎಲ್ಲ ರೀತಿಯ ಸಹಕಾರ ನೀಡುವ ಜೊತೆಗೆ ನಮ್ಮ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದ ಅವರು ಬಳಿಕ ಮೌನವಾದರು’ ಎಂದು ಮಲಿಕ್ ತಿಳಿಸಿದ್ದಾರೆ.

ಪ್ರತಿಯೊಬ್ಬ ಮಹಿಳಾ ಕುಸ್ತಿಪಟುವಿನ ಕಥೆಯನ್ನು ಕೇಳಿದ ಮೇರಿಕೋಮ್, ಭಹಳ ಭಾವುಕರಾದರು. ನನಗೆ ಬಹಳ ಕಷ್ಟವಾಗುತ್ತಿದೆ ಎಂದು ನೊಂದುಕೊಂಡರು. ನಾನು ನಿಮ್ಮ ಪರ ನಿಲ್ಲುವುದಾಗಿ ಹೇಳಿದ್ದರು. ಅದಾಗಿ, ಹಲವು ತಿಂಗಳು ಕಳೆದಿದ್ದು, ಈಗಲೂ ಅವರ ಮೌನವಹಿಸಿರುವುದು ನನಗೆ ಬೇಸರ ತರಿಸಿದೆ ಎಂದು ಮಲಿಕ್ ಹೇಳಿದ್ದಾರೆ.

ಮೇರಿಕೋಮ್ ಮೌನ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಏಕೆಂದರೆ, ಅವರೊಬ್ಬ ಸ್ಫೂರ್ತಿಯ ಕ್ರೀಡಾಳು ಎಂದು ಭಾವಿಸಿದ್ದೆ ಎಂದು ಮಲಿಕ್ ನೋವು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.