ನವದೆಹಲಿ: ಶನಿವಾರ ಜೀ ಟಿವಿ ಸ್ಟುಡಿಯೊದಲ್ಲಿ ರಾಜಕೀಯ ಚರ್ಚೆ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೋರಿಯಾ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೊಡೆದಾಡಿಕೊಂಡ ಘಟನೆ ನಡೆದಿದೆ.

ವಾಹಿನಿಯಲ್ಲಿ ನೇರ ಪ್ರಸಾರದ ವೇಳೆ ರಾಜಕೀಯ ವಕ್ತಾರರಿಬ್ಬರು ಈ ರೀತಿ ಹೊಡೆದಾಡಿಕೊಂಡಿದ್ದು, ಆ ವಿಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಈ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ವಕ್ತಾರರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಚರ್ಚೆ ವಾಗ್ವಾದಕ್ಕೆ ತಿರುಗಿದಾಗ ಭದೋರಿಯಾ ಭಾಟಿಯಾರನ್ನು ತಳ್ಳಿದ್ದಾರೆ.ಇಬ್ಬರೂ ಪರಸ್ಪರಜಗಳವಾಡಿಕೊಂಡಾಗ ಸ್ಟುಡಿಯೊದಲ್ಲಿದ್ದವರು ಜಗಳ ಬಿಡಿಸಲು ಯತ್ನಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತ್ರಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ನೋಯ್ಡಾದ ಸೆಕ್ಟರ್ 16-Aಯಲ್ಲಿ ಇರುವ ಸುದ್ದಿ ವಾಹಿನಿಯ ಸ್ಟುಡಿಯೊದಲ್ಲಿ ರಾಜಕೀಯ ನಾಯಕರಿಬ್ಬರು ಜಗಳವಾಡಿದ್ದು, ಬಿಜೆಪಿ ವಕ್ತಾರ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಪ್ರಕಾರ ಭದೋರಿಯಾ ಅವರನ್ನು ವಶ ಪಡಿಸಿಕೊಂಡಿದ್ದು, ಈ ವಿಡಿಯೊ ದೃಶ್ಯಗಳನ್ನು ಪೊಲೀಸರಿಗೆ ನೀಡುವಂತೆ ವಾಹಿನಿಗೆ ಆದೇಶಿಸಲಾಗಿದೆ ಎಂದಿದ್ದಾರೆ.

ಏತನ್ಮಧ್ಯೆ, ಭದೋರಿಯಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಸುರೇಂದ್ರ ಸಿಂಗ್ ನಾಗರ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.