ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅರ್ಜಿದಾರರಿಗೆ ತಲಾ ₹ 1 ಲಕ್ಷ ದಂಡ ವಿಧಿಸಲಾಗಿದ್ದು, ಒಂದು ತಿಂಗಳೊಳಗೆ ಪಾವತಿಸುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣನ್ ಮುರಾರಿ ಅವರ ಪೀಠ ಸೂಚಿಸಿದೆ.

ಐವರು ನ್ಯಾಯಮೂರ್ತಿಗಳ ಪೀಠ ಈಗಾಗಲೇ ರಾಮಜನ್ಮಭೂಮಿ ಸಂಬಂಧ ತೀರ್ಪನ್ನು ನೀಡಿದೆ. ಅರ್ಜಿಗಳು ಈ ತೀರ್ಪನ್ನುಪ್ರಶ್ನಿಸುವಂತಿವೆ.ಇವು ಗಂಭೀರವಲ್ಲದ ‘ಕ್ಷುಲ್ಲಕ’ ಅರ್ಜಿಗಳು ಎಂದೂ ಹೇಳಿದೆ.

ರಾಮಜನ್ಮಭೂಮಿ ಟ್ರಸ್ಟ್ ಕಲಾಕೃತಿ ಮತ್ತು ದೊರೆತ ವಸ್ತುಗಳನ್ನು ರಕ್ಷಿಸುವುದಾಗಿ ಹೇಳಿದೆ. ಆದರೂ, ಅರ್ಜಿದಾರರು ಸಂವಿಧಾನದ 32ನೇ ವಿಧಿಯನ್ವಯ ಕೋರ್ಟ್ ಮುಂದೆ ಬಂದಿರುವುದು ಏಕೆ ಎಂದು ಪೀಠ ಪ್ರಶ್ನಿಸಿತು. ಅರ್ಜಿದಾರರಾದ ಸತೀಶ್ ಚಿಂದೂಜಿ ಶಂಭರ್ಕರ್ ಮತ್ತು ಡಾ.ಅಂಬೇಡ್ಕರ್ ಫೌಂಡೇಶನ್ಗೆ ದಂಡ ವಿಧಿಸಬೇಕು ಎಂದು ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಪೀಠ ಪುರಸ್ಕರಿಸಿತು.

ಅಯೋಧ್ಯೆಯಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವಂತೆಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.