ನವದೆಹಲಿ: ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಮೇಲಿನ ನಿಷೇಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

‘ಅರ್ಜಿಗಳನ್ನು ಜನವರಿ 18ರಂದೇ ವಿಚಾರಣೆಗೆ ಪರಿಗಣಿಸಲಾಗಿದೆ. ಆದರೆ, ಈ ವರೆಗೆ ದಿನ ನಿಗದಿಯಾಗಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಎಸ್.ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠವು ಮುಂದಿನ ವಾರ ನಡೆಸಲಿದೆ. ಅದರ ಬಳಿಕ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿ ಮಾಡಿ’ ಎಂದು ತಿಳಿಸಿತು.

2001ರಲ್ಲಿ ಸಿಮಿ ಸಂಘಟನೆಯನ್ನು ಮೊದಲ ಬಾರಿಗೆ ನಿಷೇಧಿಸಲಾಯಿತು. 2019ರಲ್ಲಿ ನಿಷೇಧವನ್ನು ಮತ್ತೆ 5 ವರ್ಷಗಳ ಕಾಲ ವಿಸ್ತರಿಸಲಾಯಿತು. ಈ ವರೆಗೆ ಸತತ ಎಂಟು ಬಾರಿ ನಿಷೇಧ ವಿಸ್ತರಣೆಯಾಗಿದೆ.

ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ. ಇಸ್ಲಾಮಿಕ್ ಆಡಳಿತ ಜಾರಿಗೆ ತರುವ ಸಿಮಿ ಸಂಘಟನೆಯ ಉದ್ದೇಶ ಈಡೇರಿಕೆಗೆ ದೇಶದಲ್ಲಿ ಅವಕಾಶವಿಲ್ಲ. ಸಮಾಜದಲ್ಲಿ ಒಡಕುಂಟು ಮಾಡುವ ಕೃತ್ಯಗಳಲ್ಲಿ ಈಗಲೂ ತೊಡಗಿಸಿಕೊಂಡಿರುವ ಸಿಮಿ, ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಬೆದರಿಕೆಯೊಡ್ಡಿದೆ’ ಎಂದು ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.