ನವದೆಹಲಿ: ‘ದಿ ಸಿಟಿಜನ್’ ಸಂಪಾದಕಿ ಸೀಮಾ ಮುಸ್ತಾಫಾ ಅವರು ಭಾರತೀಯ ಸಂಪಾದಕರ ಒಕ್ಕೂಟದ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ಅಧ್ಯಕ್ಷೆಯಾಗಿ ಶನಿವಾರ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ‘ದಿ ಕಾರವಾನ್’ ಸಂಪಾದಕ ಅನಂತ್ ನಾಥ್ ಮತ್ತು ‘ಸಕಾಳ್’ ಮಾಧ್ಯಮ ಸಮೂಹದ ಮುಖ್ಯ ಸಂಪಾದಕ ಶ್ರೀರಾಮ್ ಪವಾರ್ ಅವರು ಕೂಡಾ ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪತ್ರಕರ್ತರಾದ ರಾಜ್ದೀಪ್ ಸರ್ದೇಸಾಯಿ, ವಿಜಯ್ ನಾಯ್ಕ್ ಮತ್ತು ಕ್ಯು.ಡಬ್ಲ್ಯು. ನಖ್ವಿ ಅವರನ್ನೊಳಗೊಂಡ ಮೂವರು ಸದಸ್ಯರ ಚುನಾವಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದೆ.

ಸೆ. 23ರಂದು ನಡೆದ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಮೂವರು ಪದಾಧಿಕಾರಿಗಳ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

2020–21ನೇ ಸಾಲಿನಲ್ಲಿ ‘ಹಾರ್ಡ್ ನ್ಯೂಸ್’ ಸಂಪಾದಕ ಸಂಜಯ್ ಕಪೂರ್ ಮತ್ತು ಅನಂತ್ ನಾಥ್ ಅವರು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.