ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

NIA ನೂತನ ಮುಖ್ಯಸ್ಥರಾಗಿ ಸದಾನಂದ ದಾಟೆ ಅಧಿಕಾರ ಸ್ವೀಕಾರ

NIA ನ ನಿರ್ಗಮಿತ ಮುಖ್ಯಸ್ಥರಾದ ದಿನಕರ್ ಗುಪ್ತಾ ಅವರು ಅಧಿಕಾರ ಹಸ್ತಾಂತರಿಸಿದರು
Published 1 ಏಪ್ರಿಲ್ 2024, 4:56 IST
Last Updated 1 ಏಪ್ರಿಲ್ 2024, 4:56 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಕೇಡರ್‌ನ ಹಿರಿಯ ಪೊಲೀಸ್ ಅಧಿಕಾರಿ ಹಾಗೂ 26/11 ಮುಂಬೈ ದಾಳಿಯ ಹೀರೊ ಎಂದು ಖ್ಯಾತರಾಗಿರುವ ಸದಾನಂದ ವಸಂತ್ ದಾಟೆ ಅವರು ರಾಷ್ಟ್ರೀಯ ತನಿಖಾ ದಳದ (NIA) ನೂತನ ಮುಖ್ಯಸ್ಥರಾಗಿ (ಡಿಜಿ) ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

NIA ನ ನಿರ್ಗಮಿತ ಮುಖ್ಯಸ್ಥರಾದ ದಿನಕರ್ ಗುಪ್ತಾ ಅವರು ಅಧಿಕಾರ ಹಸ್ತಾಂತರಿಸಿದರು.

1990 ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸದಾನಂದ ದಾಟೆ ಅವರು ಇದಕ್ಕೂ ಮೊದಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯ (ATS) ಮುಖ್ಯಸ್ಥರಾಗಿದ್ದರು.

ಮಹಾರಾಷ್ಟ್ರ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳೂ ಸೇರಿದಂತೆ ದಾಟೆ ಅವರು ಸಿಬಿಐ ಹಾಗೂ ಸಿಆರ್‌ಪಿಎಫ್‌ನಲ್ಲೂ ಕೆಲಸ ಮಾಡಿದ್ದರು.

2008ರಲ್ಲಿ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯ ವೇಳೆ ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಸಮರ್ಥವಾಗಿ ಹೋರಾಡಿದ್ದಕ್ಕೆ ದಾಟೆ ಅವರಿಗೆ ರಾಷ್ಟ್ರಪತಿ ಪದಕ ದಕ್ಕಿತ್ತು.

ಮುಂಬೈ ದಾಳಿಯ ನಂತರ ಭಯೋತ್ಪಾದನೆ ಮಟ್ಟ ಹಾಕಲು 2008ರಲ್ಲಿ ಕೇಂದ್ರ ಸರ್ಕಾರ ಎನ್‌ಐಎ ಅನ್ನು ಸ್ಥಾಪಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT