ಎರ್ನಾಕುಲಂ: ಇಲ್ಲಿನ ಎಲೂರಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 500 ಜನರನ್ನು 13ನೇ ಘರ್‌ವಾಲ್ ರೈಫಲ್ಸ್ ಪಡೆ ಯೋಧರು ರಕ್ಷಣೆ ಮಾಡಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಮಂಗಳವಾರ ಸುರಿದ ಮಳೆಗೆ ಇಲ್ಲಿನ ವಸತಿ ಸಂಕೀರ್ಣ ಸಂಪೂರ್ಣಗಿ ನೀರಿನಿಂದ ಆವೃತವಾಗಿತ್ತು. ಇಲ್ಲಿನ ಫ್ಲಾಟ್‌ಗಳಲ್ಲಿ 500ಕ್ಕೂ ಹೆಚ್ಚು ಜನರು ವಾಸವಾಗಿದ್ದರು. ಫ್ಲಾಟ್‌ನಿಂದ ಹೊರ ಬರಲಾಗದೇ ಅವರು ಪರದಾಡುತ್ತಿದ್ದರು. ಈ ವೇಳೆ ರಾಜ್ಯ ಸರ್ಕಾರದ ಸಹಾಯವಾಣಿಗೆ ನಾಗರಿಕರೊಬ್ಬರು ಕರೆ ಮಾಡಿದ್ದರು. ಒಂದು ಗಂಟೆಯ ಬಳಿಕ ಎರಡು ದೋಣಿಗಳಲ್ಲಿ ಆಗಮಿಸಿದ ರಕ್ಷಣಾ ಕಾರ್ಯಕರ್ತರ ತಮ್ಮಿಂದ ಸಾಧ್ಯವಾಗದಿದ್ದಾಗ ಸೇನಾ ಪಡೆಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಸುದ್ದಿ ತಿಳಿದ13ನೇ ಘರ್‌ವಾಲ್ ರೈಫಲ್ಸ್ ಪಡೆಯ ಯೋಧರು ಸ್ಥಳಕ್ಕೆ ಆಗಮಿಸಿದರು. ನಂತರ ಪರಿಸ್ಥಿತಿಯನ್ನು ಅವಲೋಕಿಸಿ ರಕ್ಷಣಾ ಕಾರ್ಯ ನಡೆಸಿದರು. 4 ಗಂಟೆಗಳ ಕಾರ್ಯಾಚರಣೆಯಲ್ಲಿ 21 ಯೋಧರು 500 ಜನರನ್ನು ರಕ್ಷಣೆ ಮಾಡಿದ್ದಾರೆ.

ಜೋರಾಗಿ ಹರಿಯುತ್ತಿದ್ದ ನೀರನ್ನು ಲೆಕ್ಕಿಸಿದೆ ದೋಣಿಗಳಲ್ಲಿ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದಾರೆ. ಮೊದಲಿಗೆ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಬಿಡಲಾಯಿತು ಎಂದು13ನೇ ಘರ್‌ವಾಲ್ ರೈಫಲ್ಸ್‌ನ ಕ್ಯಾಪ್ಟನ್ ರಿಶವ್ ಜುಮ್‌ವಾಲ್ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ರಕ್ಷಣಾ ಕಾರ್ಯ ಮಾಡಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ, ಯೋಧರಿಗೆ ಇದಕ್ಕಿಂತ ಸಂತೋಷ ಬೇರೆ ಯಾವುದಿದೆ ಎಂದು ರಿಶವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.