ರಾಂಚಿ: ಜಾರ್ಖಂಡ್ನ ಖುಂತಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಅಂಗವಿಕಲ ತಾಯಿಯಿಂದ ಮತದಾನ ಮಾಡಿಸುವ ಸಲುವಾಗಿ ಆಕೆಯನ್ನು ಭುಜದ ಮೇಲೆ ಹೊತ್ತು ಮೂರು ಕಿ.ಮೀ. ನಡೆದಿದ್ದಾರೆ.

ಇಟ್ವಾರಿ ದೇವಿಯನ್ನು ಆಕೆಯ ಮಗ ಬಸಂತ್ ಮುಂಡಾ ಹೊತ್ತು ಸಾಗುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾರೆ.

‘ನನ್ನ ತಾಯಿಗೆ ಒಂದು ವರ್ಷದಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ಅವರು ಮನೆಯಲ್ಲಿಯೇ ಮತದಾನ ಮಾಡಬೇಕಿತ್ತು. ಆದರೆ, ಯಾವ ಚುನಾವಣಾಧಿಕಾರಿಯೂ ಇತ್ತ ಬಂದಿಲ್ಲ. ನಮ್ಮ ತಾಯಿಗೆ ಮತದಾನದ ಹಕ್ಕನ್ನು ಚಲಾಯಿಸುವ ಬಯಕೆ. ಹಾಗಾಗಿ, ನಾನು ಅವರನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ನಡೆಯದೇ ಬೇರೆ ಮಾರ್ಗವೇ ಇರಲಿಲ್ಲ’ ಎಂದು ಬಸಂತ್ ಮುಂಡಾ ತಿಳಿಸಿದ್ದಾರೆ.

ಅಂಗವಿಕಲ ಮತದಾರರು ಮತದಾನ ಮಾಡಲು ಚುನಾವಣಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.