ನವದೆಹಲಿ: ಪ್ರಧಾನಿಗೆ ಭದ್ರತೆ ಒದಗಿಸುವ ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ನಿರ್ದೇಶಕರಾಗಿದ್ದ ಅರುಣ್ ಕುಮಾರ್ ಸಿನ್ಹಾ (61) ಬುಧವಾರ ಗುರುಗ್ರಾಮ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯಕ್ಕೀಡಾಗಿದ್ದ ಸಿನ್ಹಾ ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕೇರಳ ಕೇಡರ್‌ನ 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಸಿನ್ಹಾ ಅವರ ಸೇವೆಯನ್ನು ಮೇ 31ರಂದು ಒಂದು ವರ್ಷ ವಿಸ್ತರಿಸಲಾಗಿತ್ತು.

ಕೇರಳ ಪೊಲೀಸ್ ಇಲಾಖೆಯಲ್ಲಿ ಮತ್ತು ಕೇಂದ್ರದ ಗಡಿ ಭದ್ರತಾ ಪಡೆಯ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದ ಸಿನ್ಹಾ, 2016ರ ಮಾರ್ಚ್‌ನಲ್ಲಿ ಎಸ್‌ಪಿಜಿಯ 12ನೇ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇವರ ಸೇವಾವಧಿ 2024ರ ಮೇ 31ರವರೆಗಿತ್ತು.

ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಸೋಸಿಯೇಷನ್ ಸಿನ್ಹಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.