ಹೈದರಾಬಾದ್:ತೆಲಂಗಾಣ-ಆಂಧ್ರ ಪ್ರದೇಶ ಗಡಿಯಲ್ಲಿರುವ ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.

ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಈ ವೇಳೆ 9 ಮಂದಿ ಸಿಲುಕಿದ್ದರು. ಶುಕ್ರವಾರ ಮಧ್ಯಾಹ್ನ 9 ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ.

ಎನ್ಡಿಆರ್ಎಫ್, ಸಿಐಎಸ್ಎಫ್, ಅಗ್ನಿಶಾಮಕ ದಳ ಮತ್ತು ಸಿಂಗರೇನಿ ಕಲ್ಲಿದ್ದಲು ಗಣಿಯಿಂದ ರಕ್ಷಣಾ ಕಾರ್ಯಾಚರಣೆಗೆ ಬಂದಿದ್ದರೂ ಅಲ್ಲಿ ಸಿಲುಕಿದ್ದ ಓರ್ವ ಮಹಿಳೆ ಮತ್ತು 8 ಗಂಡಸರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ದಟ್ಟವಾಗಿ ಹಬ್ಬಿದ ಹೊಗೆ ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸಿದೆ.

ಮೃತಪಟ್ಟವರಲ್ಲಿ ತೆಲಂಗಾಣ ರಾಜ್ಯವಿದ್ಯುತ್ ತಯಾರಿಕಾ ಕಾರ್ಪೊರೇಷನ್ (TSGENCO)ನ ಇಬ್ಬರು ಉದ್ಯೋಗಿಗಳು ಮತ್ತು ಡೆಪ್ಯುಟಿ ಎಂಜಿನಿಯರ್, ಖಾಸಗಿ ಕಂಪನಿಯ ಇಬ್ಬರು ಉದ್ಯೋಗಿಗಳು ಇದ್ದಾರೆ.

ಅಗ್ನಿ ದುರಂತದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.