ನವದೆಹಲಿ: ಕೋವಿಡ್–19 ಚಿಕಿತ್ಸೆಗಾಗಿಯೇ ಮೀಸಲಾದ ವೈದ್ಯಕೀಯ ಸೌಲಭ್ಯಗಳು ಬಳಕೆಗೆ ಸನ್ನದ್ಧವಾಗಿರುವುದನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಡಿ.27ರಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಲೀಮು ಹಮ್ಮಿಕೊಳ್ಳಲಾಗಿದೆ.

ಅದರಲ್ಲೂ, ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳು, ವೆಂಟಿಲೇಟರ್ಗಳು, ಸಾಗಣೆ ವ್ಯವಸ್ಥೆ, ಮಾನವ ಸಂಪನ್ಮೂಲಗಳ ಸನ್ನದ್ಧತೆ ಬಗ್ಗೆ ಈ ತಾಲೀಮು ಸಂದರ್ಭದಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ವರ್ಚುವಲ್ ವಿಧಾನದ ಮೂಲಕ ನಡೆದ ಸಭೆಯಲ್ಲಿ ಕೇಂದ್ರ ಆರೊಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಈ ತಾಲೀಮು ಕುರಿತು ಸಲಹೆಗಳನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ತಿಳಿಸಲಾಗಿರುವ ‘ಕಣ್ಗಾವಲು ಕಾರ್ಯತಂತ್ರ’ದ ಅನ್ವಯ, ಸಂಭಾವ್ಯ ಪರಿಸ್ಥಿತಿ ಬಗ್ಗೆ ಕಣ್ಗಾವಲನ್ನು ಬಲಗೊಳಿಸಬೇಕು. ಕೋವಿಡ್ ಪತ್ತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು, ಮುನ್ನೆಚ್ಚರಿಕೆ ಡೋಸ್ಗಳನ್ನು ಪಡೆಯುವಂತೆ ಜನರನ್ನು ಉತ್ತೇಜಿಸಬೇಕು ಎಂಬುದು ಸೇರಿದಂತೆ ಹಲವಾರು ಸಲಹೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಇವೇ ಮೂಲಗಳು ಹೇಳಿವೆ.

ಬಿಎಫ್ 7 ಉಪತಳಿ: ಭಾರತ ಆತಂಕ ಪಡಬೇಕಿಲ್ಲ- ವಿಜ್ಞಾನಿ ರಾಕೇಶ್ ಮಿಶ್ರಾ ಅಭಿಮತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.