ನವದೆಹಲಿ: ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜ್ಯಸಭೆ ಸದಸ್ಯೆಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ ಭವನದಲ್ಲಿ ಸುಧಾ ಮೂರ್ತಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ರಾಜ್ಯಸಭಾ ನಾಯಕ ಪಿಯೂಷ್ ಗೋಯೆಲ್ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಸುಧಾ ಮೂರ್ತಿ ಅವರ ಪತಿ ನಾರಾಯಣ ಮೂರ್ತಿ ಕೂಡ ಹಾಜರಿದ್ದರು.

ಮಹಿಳಾ ದಿನಾಚರಣೆಯಂದು ಸುಧಾ ಮೂರ್ತಿಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.

ಇವರು ಪ್ರಸ್ತುತ ರಾಜ್ಯಸಭೆಯಲ್ಲಿರುವ ಕರ್ನಾಟಕದ ಎರಡನೇ ನಾಮನಿರ್ದೇಶಿತ ಸದಸ್ಯರಾಗಲಿದ್ದಾರೆ.
.ಸುಧಾ ಮೂರ್ತಿ ₹5,600 ಕೋಟಿ ಮೌಲ್ಯದ ಷೇರುಗಳ ಒಡತಿ.
ಸುಧಾಮೂರ್ತಿ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ನಂತರ ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ 2ನೇ ಸದಸ್ಯರಾಗಿದ್ದಾರೆ. ಹಗ್ಗಡೆ ಅವರು 2022ರ ಜುಲೈನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು

73 ವರ್ಷದ ಸುಧಾಮೂರ್ತಿ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿಯವರು. ಸುಧಾಮೂರ್ತಿ ಅವರು 40ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಸಮಾಜ ಸೇವೆಗಾಗಿ ಅವರಿಗೆ ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. 2006ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು.
.ರಾಜ್ಯಸಭೆಗೆ ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನಾಮನಿರ್ದೇಶನ.ರಾಜ್ಯಸಭೆಗೆ ನಾಮನಿರ್ದೇಶನ: ಮಹಿಳಾ ದಿನದಂದು ಡಬಲ್ ಸರ್ಪ್ರೈಸ್ ಎಂದ ಸುಧಾ ಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.