ಚೆನ್ನೈ: ತಮಿಳುನಾಡಿನಲ್ಲಿ ಪೌರ ಕಾರ್ಮಿಕ ಮಹಿಳೆಯೊಬ್ಬರು ತಾವು ಕೆಲಸ ಮಾಡುವ ಸಂದರ್ಭದಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ನಾಣ್ಯದ ಬೆಲೆ ₹7.5 ಲಕ್ಷ ಎಂದು ಹೇಳಲಾಗಿದೆ. ಪೌರ ಕಾರ್ಮಿಕ ಮಹಿಳೆ ಮೇರಿ ಅವರು ತಿರುವೊಟ್ಟಿಯುರ್ ಬೀದಿಯಲ್ಲಿ ಕಸ ಬೇರ್ಪಡಿಸುತ್ತಿದ್ದ ಸಂದರ್ಭದಲ್ಲಿ ನಾಣ್ಯದ ಶಬ್ದ ಕೇಳಿಸಿತ್ತು. ಚೀಲದಲ್ಲಿ ಚಿನ್ನದ ನಾಣ್ಯ ಇರುವುದು ಪತ್ತೆಯಾಗಿತ್ತು. ಕೂಡಲೇ ಮೇರಿ ಅದನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಇದರ ನಡುವೆ ತಿರುವೊಟ್ಟಿಯುರ್ನ ಗಣೇಶ್ ರಾಮನ್ ಅವರು ತಮ್ಮ ಮನೆಯಲ್ಲಿ 100 ಗ್ರಾಂ ಚಿನ್ನದ ನಾಣ್ಯ ನಾಪತ್ತೆಯಾಗಿದೆ ಎಂದು ಪೋಲಿಸರಿಗೆ ದೂರು ನೀಡಿದ್ದರು. ಚಿನ್ನದ ನಾಣ್ಯವನ್ನು ಚಿಕ್ಕ ಚೀಲದಲ್ಲಿ ಸುತ್ತಿ ತನ್ನ ಹಾಸಿಗೆಯ ಕೆಳಗೆ ಇಟ್ಟುಕೊಂಡಿದ್ದೆ. ಈ ಮಾಹಿತಿ ಅರಿಯದ ನನ್ನ ಪತ್ನಿ ಆ ಚೀಲವನ್ನು ಕಸದ ಬುಟ್ಟಿಗೆ ಎಸೆದಿರುವುದಾಗಿ ಪೊಲೀಸರ ಬಳಿ ಹೇಳಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಜತೆಗೆ, ಮೇರಿ ಹಾಗೂ ಮನೆ ಮಾಲೀಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇದೇ ವೇಳೆ ಮಾಲೀಕರಿಗೆ ನಾಣ್ಯವನ್ನು ಹಿಂತಿರುಗಿಸಿದ್ದಾರೆ. ಜತೆಗೆ, ಮೇರಿಯವರ ಪ್ರಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ... ರಾಹುಲ್ ಗಾಂಧಿಡ್ರಗ್ಸ್ ಪೆಡ್ಲರ್ ಎಂಬಕಟೀಲ್ ಹೇಳಿಕೆಸರಿಯಲ್ಲ: ಬಿಎಸ್ವೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.