ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಮಧುರೈನ ಆವನಿಯಪುರಂ ಪ್ರದೇಶದಲ್ಲಿ ನಡೆದ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯಲ್ಲಿ ಓರ್ವ ಮೃತಪಟ್ಟಿದ್ದು, 80 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆ 'ಎಎನ್ಐ' ವರದಿ ಮಾಡಿದೆ. ಅಧಿಕಾರಿಗಳ ಪ್ರಕಾರ ಗಾಯಗೊಂಡವರಲ್ಲಿ 38 ಗೂಳಿ ಪಳಗಿಸುವ ಸ್ಪರ್ಧಿಗಳು, 24 ಗೂಳಿ ಮಾಲೀಕರು ಹಾಗೂ 18 ಪ್ರೇಕ್ಷಕರು ಸೇರಿದ್ದಾರೆ.

ಇದನ್ನೂ ಓದಿ:ಚರ್ಚೆ: ಗರ್ಭಗುಡಿಯ ನಿಯಮ ಘಟ್ಟಕ್ಕೂ ಬೇಕು

ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿ ಪಳಗಿಸುವ ಸಾಂಪ್ರದಾಯಿಕ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯು ವಿಜೃಂಭಣೆಯಿಂದ ನಡೆಯುತ್ತದೆ. ಆ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗುತ್ತದೆ.

ನೆರೆದಿದ್ದ ಜನರ ಹರ್ಷೋದ್ಗಾರ, ಕೇಕೆ ನಡುವೆ ಸುಮಾರು 300ರಷ್ಟು ಗೂಳಿಗಳನ್ನು ಜನರ ಗುಂಪಿಗೆ ಬಿಡಲಾಗಿತ್ತು. ಗೂಳಿ ತಿವಿತಕ್ಕೆ 18 ವರ್ಷದ ಬಾಲಮುರುಗನ್ ಎಂಬವರು ಮೃತಪಟ್ಟಿದ್ದಾರೆ.

ವರ್ಷಂಪ್ರತಿ ತಮಿಳುನಾಡಿನ ವಿವಿಧೆಡೆಗಳಲ್ಲಿ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆ ಆಯೋಜಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.