ನವದೆಹಲಿ: ಬಾಲಿವುಡ್ ನಟಿ ತಾಪ್ಸಿ ಪನ್ನು ದೆಹಲಿಯಲ್ಲಿ ಮತದಾನ ಮಾಡಿರುವುದಕ್ಕೆ ಆಕ್ಷೇಪಿಸಿದ ಟ್ವಿಟಿಗರ ವಿರುದ್ಧತಿರುಗಿಬಿದ್ದಿದ್ದಾರೆ.

ಅಲ್ಲದೆ, ನನ್ನ ಪೌರತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

ವಿವರವೇನೆಂದರೆ, ನಟಿ ತಾಪ್ಸಿ ಪನ್ನು ಶನಿವಾರ ದೆಹಲಿಯಲ್ಲಿ ನಡೆಯುತ್ತಿರುವ ಮತದಾನಕ್ಕೆ ತೆರಳಿ ಕುಟುಂಬ ಸದಸ್ಯರ ಜೊತೆ ಮತದಾನ ಮಾಡಿದ ಫೋಟೋವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಟ್ವಿಟಿಗರೊಬ್ಬರು ನಟಿ ತಾಪ್ಸಿ ಪನ್ನು ಇನ್ನೂ ಮುಂಬೈಗೆ ತಮ್ಮ ಹೆಸರನ್ನು ವರ್ಗಾಯಿಸಿಲ್ಲವೇ. ಅವರು ಕೆಲಸ ಮಾಡುತ್ತಿರುವುದು ಮುಂಬೈನಲ್ಲಿ ಅಲ್ಲವೆ, ಮತದಾವನ್ನು ದೆಹಲಿ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿಬಿಟ್ಟರು.

ಇಷ್ಟಕ್ಕೆ ಕೋಪಗೊಂಡ ತಾಪ್ಸಿಉದ್ದದ ಉತ್ತರವೊಂದನ್ನು ಟ್ವೀಟ್ ಮಾಡಿ, ನಾನು ದೆಹಲಿಯಲ್ಲಿಯೂ ವಾಸ ಮಾಡುತ್ತಿದ್ದೇನೆ. ಮುಂಬೈನಲ್ಲೂ ವಾಸಮಾಡುತ್ತೇನೆ. ನನ್ನ ಪೌರತ್ವವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನಾನು ದೆಹಲಿ ಮೂಲಕವೇ ತೆರಿಗೆ ಕಟ್ಟುತ್ತಿದ್ದೇನೆ. ದಯವಿಟ್ಟು ನನ್ನ ಪೌರತ್ವವನ್ನು ಪ್ರಶ್ನಿಸಬೇಡಿ. ನಿಮ್ಮ ಸಮಸ್ಯೆಗಳು ನಿಮಗೆ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

ಅಲ್ಲದೆ, ನೀವು ದೆಹಲಿಯಿಂದ ಒಂದು ಹುಡುಗಿಯನ್ನು ಹೊರಗೆ ಕರೆದೊಯ್ಯಬಹುದು. ಆದರೆ, ಈ ಹುಡುಗಿಯಿಂದ ದೆಹಲಿಯನ್ನು ಹೊರಗಿಡಲು ಸಾಧ್ಯವಿಲ್ಲ. ನೀವು ಇದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳಲು ಬರಬೇಡಿ. ಇಷ್ಟು ಪ್ರತಿಕ್ರಿಯೆ ಸಾಕೆನಿಸುತ್ತದೆ ಎಂದು ಹೇಳಿ ಇದರಿಂದ ನನಗೆ ಖುಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.