ಉದಕಮಂಡಲ(ಊಟಿ): ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿ ತಾಪಮಾನವು ಭಾರಿ ಇಳಿಕೆಯಾಗಿದ್ದು, ದಿಢೀರ್ ಹವಾಮಾನ ಬದಲಾವಣೆಯಿಂದಾಗಿ ಜನರು ತತ್ತರಿಸಿದ್ದಾರೆ.

ಎಲ್ಲಿ ನೋಡಿದರೂ ದಟ್ಟವಾದ ಮಂಜು ಆವರಿಸಿದ್ದು, ವಿಪರೀತ ಚಳಿಯಿಂದಾಗಿ ಸ್ಥಳೀಯರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಈ ಅಕಾಲಿಕ ಚಳಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.

ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಈ ರೀತಿಯ ವಾತಾವರಣವು ಕಂಡುಬರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಲ್ಲಿನ ಕಾಂತಲ್, ತಲೈಕುಂಠ ಪ್ರದೇಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಸಾಂದಿನಲ್ಲ, ಬೊಟಾನಿಕಲ್ ಗಾರ್ಡನ್ ಪ್ರದೇಶಗಳಲ್ಲೂ ತಾಪಮಾನ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.