ನವದೆಹಲಿ: ಇಂದು ವಿಧಾನಸಭೆ ಚುನಾವಣೆ ನಡೆದ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸಂಜೆ 5 ಗಂಟೆಯವರೆಗಿನ ತಾತ್ಕಾಲಿಕ ಅಂಕಿಅಂಶದ ಪ್ರಕಾರ ಕ್ರಮವಾಗಿ ಶೇಕಡ 67.34 ಮತ್ತು ಶೇಕಡ 71.11ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ (ಇಸಿ) ಶುಕ್ರವಾರ ತಿಳಿಸಿದೆ.

ಮತಗಟ್ಟೆಗಳ ಅಂತಿಮ ವರದಿ ಬಂದ ಬಳಿಕ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾನದ ಅವಧಿ ಮುಗಿಯುವವರೆಗೆ ಮತಗಟ್ಟೆಗಳನ್ನು ತಲುಪುವ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಮತದಾನಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯ ನಂತರ ಅಂತಿಮ ಅಂಕಿಅಂಶಗಳು ಶನಿವಾರದೊಳಗೆ ತಿಳಿಯಲಿವೆ ಎಂದು ಇಸಿ ತಿಳಿಸಿದೆ.

ಛತ್ತೀಸ್‌ಗಢದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಎರಡನೇ ಹಂತದಲ್ಲಿ ಮತದಾನ ನಡೆದಿದ್ದು, ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.