ನವದೆಹಲಿ: ‘ವಯನಾಡಿನಲ್ಲಿ ಸ್ಮರಣೀಯ ದಿನದ ಕೆಲವು ನೆನಪುಗಳು’(Some memories of a memorable day in Wayanad). ಎಕ್ಸ್‌ನಲ್ಲಿ ವಯನಾಡಿನ ಭೂಕುಸಿತದ ಕುರಿತಾದ ವಿಡಿಯೊ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್. ಅದಕ್ಕೆ ಈ ರೀತಿ ಅಡಿಬರಹ ನೀಡಿದ್ದರು.

ಈ ಕುರಿತಂತೆ ಎಕ್ಸ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಪೋಸ್ಟ್‌ನಲ್ಲಿ ಸ್ಮರಣೀಯ ಪದ ಬಳಕೆ ಕುರಿತಂತೆ ಹಲವರು, ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ವಿನಾಶ ಮತ್ತು ಸಾವು ಶಶಿ ತರೂರ್ ಅವರಿಗೆ ಸ್ಮರಣೀಯ’ಎಂದು ಎಕ್ಸ್ ಬಳಕೆದಾರರೊಬ್ಬರು ಟೀಕಿಸಿದ್ದಾರೆ.

ತಮ್ಮ ಪೋಸ್ಟ್ ಕುರಿತಾದ ಟ್ರೋಲ್‌ಗಳಿಗೆ ತಿರುಗೇಟು ನೀಡಿರುವ ತರೂರ್, 'memorable' ಪದದ ಅರ್ಥವೆಂದರೆ ಯಾವುದೋ ಒಂದು ನೆನಪಿನಲ್ಲಿ ಉಳಿಯಬಹುದಾದಂತಹ ಘಟನೆ ಅಥವಾ ಸದಾ ನೆನಪಿನಲ್ಲಿರಬಹುದಾದದ್ದು. ಏಕೆಂದರೆ, ಅದು ವಿಶೇಷ ಅಥವಾ ಮರೆಯಲಾಗದ್ದು. ಅಷ್ಟೇ ನನ್ನ ಪೋಸ್ಟ್‌ನ ಅರ್ಥ’ ಎಂದಿದ್ದಾರೆ.

ವಯನಾಡು ದುರಂತದಲ್ಲಿ ಜೀವಂತವಾಗಿರುವವರ ಪತ್ತೆ, ಮೃತದೇಹಗಳ ಶೋಧ ಕಾರ್ಯಾಚರಣೆಗೆ ಅತ್ಯಾಧುನಿಕ ರಾಡಾರ್, ಡ್ರೋನ್‌ಗಳು, ಉಪಕರಣಗಳನ್ನು ಬಳಸಲಾಗುತ್ತಿದೆ.

ಸತತ 6ನೇ ದಿನವೂ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ 350 ದಾಟಿದೆ.
.Wayanad Landslide | ಮನಮಿಡಿದ ನಾಡಿನಲ್ಲಿ ಸೌಹಾರ್ದದ ‘ಸಂಸ್ಕಾರ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.