ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು(ಟಿಐಎಎಲ್) ಜನವರಿ 1ರಿಂದ ಸೈಲೆಂಟ್ ಏರ್ಪೋರ್ಟ್ ಆಗಿ ಬದಲಾಗಲಿದೆ.

ಪ್ರಯಾಣಿಕರಿಗೆ ಶಬ್ಧರಹಿತ ಮತ್ತು ಶಾಂತಿಯುತ ಪ್ರಯಾಣದ ಅನುಭವ ನೀಡಲಾಗುವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಸೈಲೆಂಟ್ ಏರ್ಪೋರ್ಟ್ ಉಪಕ್ರಮದ ಉದ್ದೇಶವು ಪ್ರಯಾಣಿಕರು ತಮ್ಮ ಕಾಯುವಿಕೆ ಸಮಯವನ್ನು ತೊಂದರೆಯಿಲ್ಲದೆ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಮಾಡುತ್ತಾ ಆನಂದಿಸುವ ಮೂಲಕ ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸುವುದಾಗಿದೆ. ಟರ್ಮಿನಲ್ -1 ಮತ್ತು ಟರ್ಮಿನಲ್ -2ರಲ್ಲಿ ಎಲ್ಲ ವಿಮಾನಗಳ ಮಾಹಿತಿಯನ್ನು ಪ್ರದರ್ಶನ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಗೇಟ್ ಮತ್ತು ಇನ್ಲೈನ್ ಬ್ಯಾಗೇಜ್ ಸ್ಕ್ರೀನಿಂಗ್ ಸಿಸ್ಟಮ್ನಲ್ಲಿ ಬದಲಾವಣೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ಮಾತ್ರ ಮೈಕ್ ಮೂಲಕ ಘೋಷಣೆ ಮಾಡಲಾಗುವುದು ಎಂದು ಅದು ಹೇಳಿದೆ.

ತುರ್ತು ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಕಟಣೆಗಳ ಅಗತ್ಯತೆಗಳಿಗೆ ಅನುಗುಣವಾಗಿ ಘೋಷಣೆಮಾಡಲಾಗುತ್ತದೆ.

ಟಿಐಎಎಲ್ನ ಸೈಲೆಂಟ್ ಏರ್ಪೋರ್ಟ್ ಉಪಕ್ರಮದ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.