ಮುಂಬೈ(ಮಹಾರಾಷ್ಟ್ರ): ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣದ ಹಂತಕರನ್ನು ಗಲ್ಲಿಗೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

ಮುಂಬೈನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪಂಜಾಬ್ನ ಜಲಂಧರ್ನ ನಿವಾಸಿ ಮೊಹಮ್ಮದ್ ಜಿಶನ್ ಅಖ್ತರ್ ಪತ್ತೆಗಾಗಿ ಭಾರಿ ಶೋಧ ನಡೆಸಲಾಗಿದೆ. ಇತನ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ಸುಮಾರು ಒಂಬತ್ತು ಪ್ರಕರಣಗಳು ದಾಖಲಾಗಿದ್ದವು. ಈ ಹತ್ಯೆಯ ಹಿಂದೆ ಆರು ಮಂದಿಯ ಪಾತ್ರ ಇರುವುದು ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
.ಬಾಬಾ ಸಿದ್ದೀಕಿ, ಅವರ ಮಗ ಜೀಶನ್ ಇಬ್ಬರೂ ನಮ್ಮ ಗುರಿಯಾಗಿದ್ದರು: ಆರೋಪಿಗಳ ಹೇಳಿಕೆ.
ಮೂವರ ಬಂಧನ:

ಪ್ರಕಣದಲ್ಲಿ ಪೊಲೀಸರು ಇಲ್ಲಿಯವರೆಗೆ ಹರಿಯಾಣದ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್ ಲೋನ್ಕರ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬೇಕಾಗಿರುವ ಮೊಹಮ್ಮದ್ ಜಿಶನ್ ಅಖ್ತರ್ ಮತ್ತು ಗೌತಮ್ಗಾಗಿ ಹುಡುಕಾಟ ನಡೆಸಿದ್ದಾರೆ.
.ಬಾಬಾ ಸಿದ್ದೀಕಿ ಹತ್ಯೆಗೆ ಪುಣೆಯಲ್ಲಿ ಸಂಚು: ಮುಂಬೈ ಪೊಲೀಸ್.
ಶೂಟರ್ಗಾಗಿ ತೀವ್ರ ಶೋಧ:

ಶಂಕಿತ ಶೂಟರ್ ಶಿವಕುಮಾರ್ ಗೌತಮ್ಗಾಗಿ ಮುಂಬೈ ಪೊಲೀಸರು ಮಧ್ಯ ಪ್ರದೇಶದ ಉಜ್ಜಯಿನಿ ಮತ್ತು ಖಾಂಡ್ವಾ ಜಿಲ್ಲೆಗಳ ಪೂಜಾ ಸ್ಥಳಗಳ ಬಳಿ ತೀವ್ರ ಶೋಧ ನಡೆಸಿದ್ದಾರೆ.
.ಸಿದ್ದೀಕಿ ಹತ್ಯೆ: ಶೂಟರ್ಗಾಗಿ ತೀವ್ರ ಶೋಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.