ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಾರೇ ಜಹಾಂ ಸೇ ಅಚ್ಚಾ..’ ಖ್ಯಾತಿಯ ಕವಿಯ ಪಠ್ಯಕ್ಕೆ ಕೊಕ್‌

ದೆಹಲಿ ವಿ.ವಿ. ನಿರ್ಧಾರ: ಇಕ್ಬಾಲ್‌ ಪಾಕ್‌ ಕವಿ ಎಂದ ಕುಲಪತಿ
Published : 27 ಮೇ 2023, 20:20 IST
Last Updated : 27 ಮೇ 2023, 20:20 IST
ಫಾಲೋ ಮಾಡಿ
Comments
‘ಸ್ವಾತಂತ್ರ್ಯ ಹೋರಾಟ ದೇಶ ವಿಭಜನೆ ಅಧ್ಯಯನಕ್ಕಾಗಿ ಪೀಠ ಸ್ಥಾಪನೆ’
ವಿಶ್ವವಿದ್ಯಾಲಯದ ಹೇಳಿಕೆಯ ಪ್ರಕಾರ ವಿ.ವಿ.ಯಲ್ಲಿ ‘ಸ್ವಾತಂತ್ರ್ಯ ಮತ್ತು ವಿಭಜನೆ ಅಧ್ಯಯನ ಕೇಂದ್ರ’ ಪೀಠವನ್ನು ಸ್ಥಾಪಿಸುವ ಪ್ರಸ್ತಾಪಕ್ಕೂ ಶೈಕ್ಷಣಿಕ ಮಂಡಳಿ ಸಭೆಯು ಅನುಮೋದನೆ ನೀಡಿತು. ‘ಸ್ವಾತಂತ್ರ್ಯ ಹೋರಾಟ ಸಂದರ್ಭದ ತೆರೆಮರೆಯ ಸಾಧಕರು ಸ್ವಾತಂತ್ರ್ಯ ಚಳವಳಿ ಹಾಗೂ ಇತಿಹಾಸದಲ್ಲಿ ದಾಖಲಾಗದೇ ಉಳಿದ ವಿವಿಧ ಅಂಶಗಳು ಬೆಳವಣಿಗೆಗಳ ಸಂಶೋಧನೆಯ ನಿಟ್ಟಿನಲ್ಲಿ ಈ ಕೇಂದ್ರವು ಕಾರ್ಯತತ್ಪರವಾಗಲಿದೆ’ ಎಂದು ತಿಳಿಸಿದೆ. ‘ದೇಶ ವಿಭಜನೆಯ ಸಂದರ್ಭದಲ್ಲಿ ಘಟಿಸಿದ ದುರಂತ ಘಟನೆಗಳ ಕುರಿತು ಆಳವಾದ ಸಂಶೋಧನೆ ಅಧ್ಯಯನ ನಡೆಯಲಿದೆ. ಇದಕ್ಕೆ ಪೂರಕವಾಗಿ ದೇಶ ವಿಭಜನೆಯ ಕಾಲಘಟ್ಟದ ಜನರ ಧ್ವನಿಯ ಮೂಲಕ ‘ಮೌಖಿಕ ಇತಿಹಾಸ’ವನ್ನು ದಾಖಲಿಸಲಾಗುತ್ತದೆ’ ಎಂದು ತಿಳಿಸಿದೆ. ಒಟ್ಟಾರೆಯಾಗಿ ಸ್ವಾತಂತ್ರ್ಯದ ಗುರಿ ಸಾಧನೆಯ ಮಾರ್ಗದಲ್ಲಿ ಎದುರಾದ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ದೇಶದ ಭೌಗೋಳಿಕ  ವಿಭಜನೆಯಿಂದ ಜನರಿಗಾದ ಭಾವನಾತ್ಮಕ ಆರ್ಥಿಕ ಮತ್ತು ಸಾಂಸ್ಕೃತಿಕ ನಷ್ಟ ಪರಿಣಾಮ ತಿಳಿಯುವುದು ಇದರ ಉದ್ದೇಶವಾಗಿದೆ. ಸ್ವಾತಂತ್ರ್ಯ ಹೋರಾಟ ದೇಶ ವಿಭಜನೆಯ ಪರಿಣಾಮವನ್ನು ಪ್ರಮುಖವಾಗಿ ಕೇಂದ್ರವು ಅಧ್ಯಯನ ಮಾಡಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT