ಅಮರಾವತಿ: ಅನಾಥಾಶ್ರಮವೊಂದರಲ್ಲಿ ಕಲಬೆರಕೆ ಆಹಾರ ಸೇವಿಸಿ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಸಂಭವಿಸಿದೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣಂನ ಚರ್ಚ್ ನಡೆಸುವ ಅನಾಥಾಶ್ರಮದಲ್ಲಿ ಶನಿವಾರ ರಾತ್ರಿ ದಾನಿಯೊಬ್ಬರು ಊಟದ ವ್ಯವಸ್ಥೆ ಮಾಡಿದ್ದರು. ಆ ಊಟ ತಿಂದ ಬಳಿಕ ಹಲವು ಮಕ್ಕಳು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಉಳಿದವರು ಚೇತರಿಸಿಕೊಂಡಿದ್ದಾರೆ ಎಂದು ಎಸ್.ಪಿ ದೀಪಿಕಾ ಪಾಟೀಲ್ ತಿಳಿಸಿದ್ದಾರೆ.

ಮೃತ ಮಕ್ಕಳು ಅನಾಥರಲ್ಲ. ಅವರಿಗೆ ಕುಟುಂಬಗಳಿವೆ, ಕುಟುಂಬದವರಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.

ಕೈಲಾಸಪಟ್ಟಣಂನ ಅನಾಥಾಶ್ರಮದಲ್ಲಿ ಅನಾಥರಲ್ಲದ ಕೆಲ ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಟ್ಟು 89 ಮಕ್ಕಳಲ್ಲಿ 30 ಮಕ್ಕಳು ಅಸ್ವಸ್ಥರಾಗಿದ್ದರು. ಸದ್ಯ ಅದರಲ್ಲಿ ಒಬ್ಬ ಬಾಲಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಎಸ್.ಪಿ ತಿಳಿಸಿದ್ದಾರೆ.
.ಆಂಧ್ರಪ್ರದೇಶ: ನಾಲ್ವರು ಮಾವೋವಾದಿಗಳ ಶರಣಾಗತಿ.ಆಂಧ್ರಪ್ರದೇಶ: ವಿವಾದ ಹುಟ್ಟುಹಾಕಿದ ‘ಜಗನ್ ಅರಮನೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.