ಚೆನ್ನೈ : ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ, ಬಿಜೆಪಿ ಹಾಗೂ ಪಿಎಂಕೆ ಮೆಗಾ ಮೈತ್ರಿಕೂಟ ಮಂಗಳವಾರ ಅಸ್ತಿತ್ವಕ್ಕೆ ಬಂದಿದ್ದು, ಆ ಮೂಲಕ ಎಐಎಡಿಎಂಕೆ ಹಲವು ವರ್ಷಗಳ ನಂತರ ಎನ್ಡಿಎ ತೆಕ್ಕೆಗೆ ಮರಳಿದೆ.

ಬಿಜೆಪಿ ಹಾಗೂ ಪಿಎಂಕೆ ಜತೆಗೂಡಿ ಲೋಕಸಭಾ ಚುನಾವಣೆ ಎದುರಿಸುವುದಾಗಿ ಎಐಎಡಿಎಂಕೆ ಘೋಷಿಸಿದೆ.

ರಾಜ್ಯದ ಬಿಜೆಪಿಗೆ 5 ಸ್ಥಾನ ಬಿಟ್ಟು ಕೊಡಲಾಗಿದೆ ಎಂದು ಎಐಎಡಿಎಂಕೆಸಂಚಾಲಕ, ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಮಂಗಳವಾರ ಪ್ರಕಟಿಸಿದರು.

ಕಳೆದ ಬಾರಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ, ಕನ್ಯಾಕುಮಾರಿಯಲ್ಲಿ ಮಾತ್ರ ಖಾತೆ ತೆರೆದಿತ್ತು.

ಸ್ಥಾನ ಹೊಂದಾಣಿಕೆ ಕುರಿತು ಮಾತುಕತೆ ನಡೆಸಲು ಕೇಂದ್ರ ಸಚಿವ, ತಮಿಳುನಾಡು ಬಿಜೆಪಿ ಉಸ್ತುವಾರಿ ಪೀಯೂಷ್ ಗೋಯಲ್ ಚೆನ್ನೈಗೆ ಬಂದಿದ್ದರು.

ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಜೊತೆಗೂ ಸ್ಥಾನ ಹೊಂದಾಣಿಕೆ ಅಂತಿಮಗೊಂಡಿದ್ದು, ಅದು ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪಿಎಂಕೆಗೆ ಒಂದು ರಾಜ್ಯಸಭಾ ಸ್ಥಾನವನ್ನೂ ನೀಡಲು ನಿರ್ಧರಿಸಲಾಗಿದೆ. ವಿಧಾನಸಭಾ ಉಪಚುನಾವಣೆಗಳಲ್ಲಿ ಎಐಎಡಿಎಂಕೆ ಬೆಂಬಲಿಸಲು ರಾಮದಾಸ್ ನೇತೃತ್ವದ ಪಿಎಂಕೆ ನಿರ್ಧರಿಸಿದೆ.

2014ರ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಿಎಂಕೆ, ಧರ್ಮಪುರಿ ಕ್ಷೇತ್ರವನ್ನು ಗೆಲ್ಲಲು ಮಾತ್ರ ಸಾಧ್ಯವಾಗಿತ್ತು.

ಕಾಂಗ್ರೆಸ್–ಡಿಎಂಕೆ ಮೈತ್ರಿ: ಇಂದು ಪ್ರಕಟ

ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್,ತಮಿಳುನಾಡಿನ ಒಂಬತ್ತು ಹಾಗೂ ಪುದುಚೇರಿಯ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಉಭಯ ಪಕ್ಷಗಳ ನಡುವಿನ ಸೀಟು ಹೊಂದಾಣಿಕೆಯು ಬುಧವಾರ ಅಧಿಕೃತವಾಗಿ ಪ್ರಕಟವಾಗಲಿದೆ.

ಎಐಎಡಿಎಂಕೆ ಜೊತೆ ಪಿಎಂಕೆ ಹೊಂದಾಣಿಕೆ ಮಾಡಿಕೊಂಡ ಬೆನ್ನಲ್ಲೇ 9+1 ಫಾರ್ಮುಲಾವನ್ನು ಡಿಎಂಕೆ, ಕಾಂಗ್ರೆಸ್ ಮುಂದೆ ಇಟ್ಟಿದೆ. ರಾಹುಲ್ ಗಾಂಧಿ ಅವರು ಇದಕ್ಕೆ ಬಹುತೇಕ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಕೆ.ಎಸ್. ಅಳಗಿರಿ ಬುಧವಾರ ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.