ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಅವರೊಂದಿಗೆ ನಡೆದ ಬಹಿರಂಗ ಚರ್ಚೆಯಲ್ಲಿ ತಾವು ಜಯ ಸಾಧಿಸಿರುವುದಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಈ ಬಹಿರಂಗ ಚರ್ಚೆಯಲ್ಲಿ ಜೊ ಬೈಡನ್ ಅವರ ‘ಅಪಾಯಕಾರಿ ರಹಸ್ಯ ಅಜೆಂಡಾಗಳನ್ನು‘ ತೆರೆದಿಟ್ಟಿದ್ದೇನೆ. ಸಾರ್ವಜನಿಕ ವಲಯದಲ್ಲಿ 47 ವರ್ಷಗಳಿಂದ ಹೇಳಿಕೊಂಡು ಬಂದಿರುವ ಸುಳ್ಳುಗಳಿಗೂ ಅವರು ಜವಾಬ್ದಾರರಾಗಿದ್ದಾರೆ‘ ಎಂದುಟ್ರಂಪ್ ಟೀಕಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಭಾಗಾಗಿ ಉಭಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಮೂರು ಸಾರ್ವಜನಿಕ ಸಂವಾದಗಳನ್ನು(ಬಹಿರಂಗ ಚರ್ಚೆಗಳು) ಆಯೋಜಿಸಲಾಗುತ್ತಿದೆ. ಅದರಲ್ಲಿ ಮೊದಲ ಚರ್ಚೆ ಮಂಗಳವಾರ ನಡೆಯಿತು. ಈ ಚರ್ಚೆಯಲ್ಲಿ ಟ್ರಂಪ್ – ಬೈಡನ್ ನಡುವೆ ವಾಕ್ಸಮರ ನಡೆಯಿತು. ಪರಸ್ಪರ ಆರೋಪ–ಪ್ರತ್ಯಾರೋಪಗಳು ವಿನಿಮಯವಾದವು. ಜನಾಂಗೀಯ ದ್ವೇಷ, ಆರ್ಥಿಕತೆ, ಹವಾಮಾನ, ಕೊರೊನಾ ಸೋಂಕು ನಿಯಂತ್ರಣ ಮತ್ತು ಆರೋಗ್ಯ ವಿಚಾರಗಳು ಚರ್ಚೆಯ ವಿಷಯವಾಗಿದ್ದವು.

ಈ ಚರ್ಚೆಯ ನಂತರ ಎರಡೂ ಪಕ್ಷಗಳು ‘ತಾವು ಈ ಚರ್ಚೆಯಲ್ಲಿ ಜಯಗಳಿಸಿರುವುದಾಗಿ‘ ಘೋಷಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.