ಇಂಫಾಲ: ಸುಲಿಗೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮಣಿಪುರದ ಇಂಫಾಲದಲ್ಲಿ ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ನ (ಯುಎನ್ಎಲ್ಎಫ್– ಪಂಬೈ ಗ್ರೂಪ್) ಇಬ್ಬರು ಸಕ್ರಿಯ ಸದಸ್ಯರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತರನ್ನು ತೌಡಮ್ ಇಬುಂಗೋಬಿ ಮೈತೆಯಿ ಮತ್ತು ಚನಮ್ ರಾಶಿನಿ ಚಾನು ಎಂದು ಗುರುತಿಸಲಾಗಿದೆ.

ಇವರನ್ನು ನ.23ರಂದು ಬಂಧಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ಒಂದು ವೈಯರ್ ಲೆಸ್ ರೆಡಿಯೊ ಮತ್ತು ಒಂದು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 11 ರಂದು ಭದ್ರತಾ ಪಡೆಗಳು ಮತ್ತು ಕುಕಿ-ಜೋ ಸಮುದಾಯದ ಶಂಕಿತ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ಮೃತಪಟ್ಟಿದ್ದರು. ಬಳಿಕ ಜಿರಿಬಾಮ್ ಜಿಲ್ಲೆಯ ಪರಿಹಾರ ಶಿಬಿರದಿಂದ ಮೈತೆಯಿ ಸಮುದಾಯಕ್ಕೆ ಸೇರಿದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಂತರ ನಾಪತ್ತೆಯಾಗಿದ್ದರು. ಈ ಘಟನೆಯ ಬಳಿಕ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿತ್ತು.
.ಮಣಿಪುರ | ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಮತ್ತೆ 7 ಜನರ ಬಂಧನ.ಮಣಿಪುರ: ಮನೆಗೆ ತಂತಿ ಬೇಲಿ ನಿರ್ಮಿಸಿಕೊಂಡ ಸಚಿವ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.