ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಪ್ರೀಂ ಕೋರ್ಟ್‌ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳ ನೇಮಕ

Published : 16 ಜುಲೈ 2024, 9:42 IST
Last Updated : 16 ಜುಲೈ 2024, 9:42 IST
ಫಾಲೋ ಮಾಡಿ
Comments
ಆರ್.ಮಹದೇವನ್:
ಹಿಂದುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿರುವ ಆರ್. ಮಹದೇವನ್ ಅವರು ಪ್ರಸ್ತುತ ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ‘ಇವರು ಮೂಲತಃ ತಮಿಳುನಾಡಿನವರರಾಗಿದ್ದು ಹಿಂದುಳಿದ ಸಮುದಾಯಕ್ಕೆ ಸೇರಿದವರು. ಇವರ ನೇಮಕದ ಮೂಲಕ ನ್ಯಾಯಪೀಠ ವೈವಿಧ್ಯ ಪಡೆಯಲಿದೆ’ ಎಂದು ಕೊಲಿಜಿಯಂ ಇವರ ಹೆಸರು ಶಿಫಾರಸು ಮಾಡುವ ಸಂದರ್ಭದಲ್ಲಿ ಅಭಿಪ್ರಾಯ ದಾಖಲಿಸಿದೆ. ‘ಮದ್ರಾಸ್‌ ಹೈಕೋರ್ಟ್‌ನ ಹಾಲಿ ಸೇವೆಯಲ್ಲಿರುವ ನ್ಯಾಯಮೂರ್ತಿಗಳ ಹಿರಿತನದಲ್ಲಿ ಆರ್.ಮಹದೇವನ್‌ ಮೂರನೇ ಸ್ಥಾನದಲ್ಲಿದ್ದಾರೆ. ಆದರೂ ಹಿಂದುಳಿದ ಸಮುದಾಯಗಳಿಗೆ ಪೀಠದಲ್ಲಿ ಪ್ರಾತಿನಿಧ್ಯ ಇರಬೇಕು ಎಂಬ ಕಾರಣದಿಂದಲೇ ಇವರ ಹೆಸರು ಪರಿಗಣಿಸಲಾಗಿದೆ’ ಎಂದು ತಿಳಿಸಿದೆ.  1963ರ ಜೂನ್ 10ರಂದು ಜನಿಸಿರುವ ಮಹದೇವನ್ ಅವರ ಸೇವಾವಧಿ ಜೂನ್‌ 2028ಕ್ಕೆ ಅಂತ್ಯವಾಗಲಿದೆ.
ಎನ್‌.ಕೋಟಿಶ್ವರ ಸಿಂಗ್:
‘ಸುಪ್ರಿಂ’ನಲ್ಲಿ ಈಶಾನ್ಯದ ಪ್ರತಿನಿಧಿ  ನ್ಯಾಯಮೂರ್ತಿ ನೊಂಗ್‌ಮೀಕಾಪಂ ಕೋಟಿಶ್ವರ ಸಿಂಗ್ ಅವರು ಮೂಲತಃ ಮಣಿಪುರದವರು. ಅಕ್ಟೋಬರ್ 2011ರಲ್ಲಿ ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಮಣಿಪುರ ಹೈಕೋರ್ಟ್‌ ಸ್ಥಾಪನೆ ಬಳಿಕ ಅಲ್ಲಿಗೆ ವರ್ಗಾವಣೆ ಆಗಿತ್ತು. 2023ರ ಫೆಬ್ರುವರಿಯಲ್ಲಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಕಾಶ್ಮೀರ್ ಮತ್ತು ಲಡಾಖ್ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು. ಫೆಬ್ರುವರಿ 2028ರಲ್ಲಿ ಅವರು 65 ವರ್ಷ ವಯಸ್ಸು ಪೂರ್ಣವಾಗಲಿದ್ದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT