ನವದೆಹಲಿ: ಸೆಪ್ಟಂಬರ್ 29ರಂದು ‘ನಿರ್ದಿಷ್ಟ ದಾಳಿ ದಿನ’ ಆಚರಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ದೇಶದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಮೂಲಕಗುರುವಾರ ನಿರ್ದೇಶನ ನೀಡಿದೆ.

ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ 2016ರ ಸೆಪ್ಟೆಂಬರ್ 29ರಂದು ಭಾರತೀಯ ಯೋಧರು ನಿರ್ದಿಷ್ಟ ದಾಳಿ ನಡೆಸಿ ಉಗ್ರರ ತಾಣಗಳನ್ನು ನಾಶಪಡಿಸಿದ್ದರು. ಇದರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸುವಂತೆ ಯುಜಿಸಿ ಹೇಳಿದೆ.

ಭದ್ರತಾ ಪಡೆಗಳ ತ್ಯಾಗಮನೋಭಾವದ ಬಗ್ಗೆ ಮಾಜಿ ಸೈನಿಕರಿಂದ ಉಪನ್ಯಾಸ ಕಾರ್ಯಕ್ರಮ, ಎನ್‌ಸಿಸಿ ವಿದ್ಯಾರ್ಥಿಗಳ ವಿಶೇಷ ಪರೇಡ್ ಆಯೋಜಿಸಬೇಕು. ಭದ್ರತಾ ಪಡೆಗಳಿಗೆ ಶುಭಾಶಯ ಕೋರುವ ಪತ್ರಗಳನ್ನು ಕಳುಹಿಸಬೇಕು ಎಂದು ಯುಜಿಸಿ ಸೂಚಿಸಿದೆ.

ದೆಹಲಿಯ ಇಂಡಿಯಾ ಗೇಟ್ ಬಳಿ ಅಂದು ಮಲ್ಟಿಮೀಡಿಯಾ ಪ್ರದರ್ಶನ ಆಯೋಜಿಸಲಾಗಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಪ್ರಮುಖ ನಗರಗಳು ಮತ್ತು ದಂಡು ಪ್ರದೇಶಗಳಲ್ಲಿ (ಕಂಟೋನ್ಮೆಂಟ್)ಇದೇ ರೀತಿಯ ಕಾರ್ಯಕ್ರಮ ಆಯೋಜಿಸಬೇಕು. ಈ ಸ್ಥಳಗಳಿಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಸಂಸ್ಥೆಗಳು ಉತ್ತೇಜಿಸಬೇಕು ಎಂದೂ ಯುಜಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.