ಗೋರಖ್‌ಪುರ, ಉತ್ತರ ಪ್ರದೇಶ: ಕರ್ನಾಟಕದ ಮೆಹಬೂಬ್ ಎಂಬವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶದ ಪೊಲೀಸರು ಕೈಬಿಟ್ಟಿದ್ದಾರೆ.

‘19 ವರ್ಷದ ಯುವತಿ ಮೇಲೆ ಅತ್ಯಾಚಾರ ಹಾಗೂ ವಂಚನೆ ಎಸಗಿದ ಆರೋಪದಡಿ ಮೆಹಬೂಬ್‌ರನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪೊಲೀಸರ ತಂಡವು ಮೆಹಬೂಬ್ ಮತ್ತು ಜೊತೆಗಿದ್ದ ಯುವತಿಯನ್ನು ಕರ್ನಾಟಕದಿಂದ ಗೋರಖ್‌ಪುರಕ್ಕೆ ಒಯ್ದಿತ್ತು. ಮೆಹಬೂಬ್ ಯುವತಿ ಜೊತೆಗೆ ವಿವಾಹ ಆಗಿರಲಿಲ್ಲ. ಹೀಗಾಗಿ ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲಾಗಿದೆ’ ಎಂದು ಚಿಲುವಟಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೀರಜ್ ರಾಯ್ ಮಾಹಿತಿ ನೀಡಿದ್ದಾರೆ.

‘ತಾನು ನೌಕಾಪಡೆಯ ಅಧಿಕಾರಿ ಎಂದು ಯುವತಿಗೆ ತಿಳಿಸಿದ್ದ ಮೆಹಬೂಬ್, ಕರ್ನಾಟಕಕ್ಕೆ ಬಂದರೆ ಒಳ್ಳೆಯ ಕೆಲಸ ಕೊಡಿಸುವುದಾಗಿ ಯುವತಿಗೆ ಆಮಿಷವೊಡ್ಡದ್ದ. ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿವೃತ್ತ ಸೈನಿಕರಾಗಿರುವ ಯುವತಿಯ ತಂದೆ, ಮಗಳು ಕಾಣೆಯಾಗಿರುವ ಕುರಿತು ಜನವರಿ 5ರಂದು ದೂರು ದಾಖಲಿಸಿದ್ದರು. ಆಕೆ ಮೆಹಬೂಬ್ ಜೊತೆ ಸಂಪರ್ಕದಲ್ಲಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಯುವತಿಯ ತಂದೆ ನೀಡಿದ್ದ ದೂರಿನ ಅನ್ವಯ ಮೆಹಬೂಬ್ ವಿರುದ್ಧ ಇದೇ 11ರಂದು ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಯುವತಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಅಂತರ ಧರ್ಮೀಯ ವಿವಾಹ: ದಂಪತಿ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಆದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.