ವಾಷಿಂಗ್ಟನ್: 1984ರಲ್ಲಿ ನಡೆದಿದ್ದ ಸಿಖ್ ನರಮೇಧವನ್ನು ಉಲ್ಲೇಖಿಸಬೇಕು ಹಾಗೂ ಸ್ಮರಿಸಬೇಕು ಎಂಬ ನಿರ್ಣಯವನ್ನು ಅಮೆರಿಕ ಸಿಖ್ ಒಕ್ಕೂಟದ ಉಪಾಧ್ಯಕ್ಷ ಸೇರಿದಂತೆ ಅಮೆರಿಕದ ನಾಲ್ವರು ಸಂಸದರು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದ್ದಾರೆ.

‘1984ರ ಸಿಖ್ ನರಮೇಧ ಸೇರಿದಂತೆ, ಇತಿಹಾಸದುದ್ದಕ್ಕೂ ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಹಲವು ಸಿಖ್ಖರನ್ನು ಗುರಿ ಮಾಡಲಾಗಿದೆ’ ಎಂದು ಸಂಸದ, ಅಮೆರಿಕ ಸಿಖ್ ಒಕ್ಕೂಟದ ಉಪಾಧ್ಯಕ್ಷ ಡೇವಿಡ್ ವಲಡ್ಯು ಹೇಳಿದ್ದಾರೆ.

‘ಇದು ಆ ದುರಂತವನ್ನು ಸ್ಮರಿಸುವ ಮತ್ತು ಪ್ರಾಣಕಳೆದುಕೊಂಡ ಮುಗ್ಧ ಸಂತ್ರಸ್ತರಿಗೆ ಗೌರವ ನೀಡುವ ಮಹತ್ವದ ಹೆಜ್ಜೆ’ ಎಂದು ಅವರು ಹೇಳಿದ್ದಾರೆ. ನಿರ್ಣಯ ಮಂಡಿಸಿದ್ದನ್ನು ಅಮೆರಿಕ ಗುರುದ್ವಾರ ಪ್ರಬಂಧಕ ಸಮಿತಿ, ಅಮೆರಿಕ ಸಿಖ್ ಒಕ್ಕೂಟ ಸಮಿತಿ ಬೆಂಬಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.