ನವದೆಹಲಿ:ಆಧಾರ್ ಪ್ರತಿಯನ್ನು ಹಂಚಿಕೊಳ್ಳಬೇಡಿ ಎಂಬ ಸೂಚನೆಯನ್ನು ಕೇಂದ್ರ ಸರ್ಕಾರವು ಭಾನುವಾರ ಹಿಂದಕ್ಕೆ ಪಡೆದಿದೆ.

ಈ ಬಗ್ಗೆ ವಿಶಿಷ್ಠ ಗುರುತು ಚಿತ್ರ ಪ್ರಾಧಿಕಾರ (ಯುಐಡಿಎಐ) ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದೆಆಧಾರ್ ಪ್ರತಿಗಳ ಫೋಟೊ ಕಾಪಿಗಳನ್ನು ಯಾವುದೇ ಸಂಸ್ಥೆ ಜತೆ ಹಂಚಿಕೊಳ್ಳಬೇಡಿ ಎಂಬ ಸೂಚನೆ ನೀಡಲಾಗಿತ್ತು.

ಈ ಸೂಚನೆ ಬಂದ ಬಳಿಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದಿಗಿಲು ಹಂಚಿಕೊಂಡಿದ್ದರು. ಹಾಗಾಗಿ ಸರ್ಕಾರ ಸೂಚನೆಯನ್ನು ಹಿಂದಕ್ಕೆ ಪಡೆದಿದೆ. ಆಧಾರ್ ಕಾರ್ಡ್ಗಳ ದುರ್ಬಳಕೆಗೆ ಅವಕಾಶ ನೀಡದಂತೆ ಆಧಾರ್ ಕಾರ್ಡ್ಗಳ ಮುಚ್ಚಿದ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳುವಂತೆಯುಐಡಿಎಐ ಈ ಹಿಂದೆ ಹೇಳಿತ್ತು.

ಪರವಾನಗಿ ಇಲ್ಲದ ಹೋಟೆಲ್ಗಳು, ಚಿತ್ರಮಂದಿರಗಳು, ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಸಂಗ್ರಹಿಸಲು ಅಥವಾ ಅದರ ಪ್ರತಿಗಳನ್ನು ಇರಿಸಿಕೊಳ್ಳಲು ಅನುಮತಿ ಇಲ್ಲ ಎಂದುಯುಐಡಿಎಐ ಹೇಳಿದೆ. ಅಧಾರ್ ಪ್ರತಿಯನ್ನು ಹಂಚಿಕೊಳ್ಳಬೇಕಾದರೆಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆ ಮಾತ್ರ ಕಾಣಿಸುವಂತಹ ಮಾಸ್ಕ್ಡ್ ಪ್ರತಿಯನ್ನು ಬಳಕೆ ಮಾಡಿ ಎಂದು ಹಿಂದಿನ ಸೂಚನೆಯಲ್ಲಿ ತಿಳಿಸಿತ್ತು

ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.ಆಧಾರ್ ಕಾರ್ಡ್ ಹಂಚಿಕೆಯಿಂದ ಉಂಟಾಗುವ ಅಪಾಯದ ಬಗ್ಗೆ ಯುಐಡಿಎಐ ಈ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು ಮತ್ತು ಜನರಿಗೆ ಅದರ ಬಗ್ಗೆ ಮಾಹಿತಿ ನೀಡಬೇಕಿತ್ತು ಎಂದು ಸಾವಿರಾರು ಜನರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದರು.

ತಮ್ಮ ಹಿಂದಿನ ಸೂಚನೆಯನ್ನು ತಪ್ಪಾಗಿ ವ್ಯಾಖ್ಯಾನಿಸುವ ಸಾಧ್ಯತೆ ಇರುವುದರಿಂದ ಆ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ.ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಗಳನ್ನು ಹಿಂದಿನಂತೆಯೇ ಬಳಸುವ ಮತ್ತು ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸುವಂತೆಯುಐಡಿಎಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.