ಬೆಂಗಳೂರು: ವೈವಾಹಿಕ ಪ್ರಕರಣವೊಂದರಲ್ಲಿ, ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.

ಖಾಸಗಿ ಮಾತುಕತೆಯನ್ನು ಸಾಕ್ಷಿಯಾಗಿ ಪರಿಗಣಿಸುವುದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
.ಸಿಜೆಐ ನಿವೃತ್ತಿ ಸನಿಹ: ವೈವಾಹಿಕ ಅತ್ಯಾಚಾರ ಅರ್ಜಿ ವಿಚಾರಣೆ ಮುಂದೂಡಿದ SC.
ಈ ಸುದ್ದಿಯನ್ನು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.

‘ದೂರವಾಣಿಯಲ್ಲಿ ನಡೆದ ಖಾಸಗಿ ಮಾತುಕತೆಯು ಖಾಸಗಿತನ ಹಕ್ಕಿನಡಿ ಬರುತ್ತದೆ’ ಎಂದು ನ್ಯಾಯಮೂರ್ತಿ ಬಿಪಿನ್ ಚಂದರ್ ನೇಗಿ ತೀರ್ಪು ನೀಡುವಾಗ ಹೇಳಿದ್ದಾರೆ.

‘ವ್ಯಕ್ತಿಯೊಬ್ಬನ ಖಾಸಗಿ ಜೀವನದಲ್ಲಿ ದೂರವಾಣಿ ಸಂಭಾಷಣೆ ಪ್ರಮುಖ ವಿಷಯ. ಒಬ್ಬರ ಮನೆ/ಕಚೇರಿಯ ಖಾಸಗಿ ದೂರವಾಣಿ ಸಂಭಾಷಣೆ ಖಂಡಿತವಾಗಿಯೂ ಖಾಸಗಿತನದ ಹಕ್ಕು ಎಂದು ಹೇಳಿಕೊಳ್ಳಬಹುದು’ ಎಂದು ಅಕ್ಟೋಬರ್ 17 ರಂದು ನೀಡಿದ ತೀರ್ಪಿನಲ್ಲಿ ಹೇಳಿದೆ.
.ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ಗೆ ಪ್ರತಿಕ್ರಿಯೆ ಸಲ್ಲಿಸದ ಕೇಂದ್ರ.
ವೈವಾಹಿಕ ಪ್ರಕರಣದ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು, ತನ್ನ ತಾಯಿ ಹಾಗೂ ಪತ್ನಿಯ ನಡುವಿನ ಫೋನ್ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿದ್ದರು.

‘ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಅನುಮತಿ ಇಲ್ಲದಿದ್ದರೆ, ಫೋನ್ ಟ್ಯಾಪಿಂಗ್ ಅಥವಾ ಈ ರೀತಿ ಕಾನೂನು ಬಾಹಿರವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಸಂವಿಧಾನದ 21ನೇ ವಿಧಿಯನ್ನು (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಉಲ್ಲಂಘಿಸಿದಂತೆ’ ಎಂದು ಕೋರ್ಟ್ ಹೇಳಿದೆ.
.ವೈವಾಹಿಕ ಅತ್ಯಾಚಾರ: ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ.
‘ಪುಟ್ಟಸ್ವಾಮಿ ಪ್ರಕರಣದಲ್ಲಿ, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಹೇಳಲಾಗಿದೆ. ಹೀಗಾಗಿ ಈ ನ್ಯಾಯಾಲಯವು ಪತಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುತ್ತದೆ’ ಎಂದು ಹೇಳಿದೆ.

ಈ ತೀರ್ಪಿನಲ್ಲಿ 1997ರಲ್ಲಿ ಪಿಯುಸಿಎಲ್ vs ಭಾರತ ಸರ್ಕಾರ (ಫೋನ್ ಟ್ಯಾಪಿಂಗ್ ಪ್ರಕರಣಗಳಲ್ಲಿ ಆಗಾಗ್ಗೆ ಉಲ್ಲೇಖಿಸಲಾಗುವ ಪ್ರಕರಣ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಉಲ್ಲೇಖಿಸಿದೆ.
.ಹಿಂದೂ ಅನುಸಾರ ಮದುವೆಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ: ವೈವಾಹಿಕ ಹಕ್ಕಿಗೆ ಸಂಚಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.