ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ | ಮಸೀದಿಯಲ್ಲಿ ಸಮೀಕ್ಷೆ ವೇಳೆ ಕಲ್ಲು ತೂರಾಟ: ಮೂರು ಮಂದಿ ಸಾವು

Published : 24 ನವೆಂಬರ್ 2024, 13:07 IST
Last Updated : 24 ನವೆಂಬರ್ 2024, 13:07 IST
ಫಾಲೋ ಮಾಡಿ
Comments
ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾ ಆಡಳಿತದ ಅಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ
ಶಾಂತಕುಮಾರ್ ಪೊಲೀಸ್‌ ಮುಖ್ಯಸ್ಥ ಉತ್ತರ ಪ್ರದೇಶ
ಗೊಂದಲ ಸೃಷ್ಟಿಸುವ ಯತ್ನ: ಅಖಿಲೇಶ್
ಲಖನೌ: ‘ಸಂಭಲ್‌ನಲ್ಲಿನ ಘಟನೆ ಗಂಭೀರವಾದುದು. ಚುನಾವಣೆಗಳ ಕುರಿತ ಚರ್ಚೆಗಳಿಗೆ ಅಡ್ಡಿಪಡಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಬೆಳಿಗ್ಗೆ ಹೊತ್ತಿನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಮೀಕ್ಷೆ ಕುರಿತ ಕಾನೂನು ಅಥವಾ ಪ್ರಕ್ರಿಯೆಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಮತ್ತೊಂದು ಕಡೆಯವರ ಮಾತು ಆಲಿಸಿಲ್ಲ. ಭಾವನೆಗಳನ್ನು ಕೆರಳಿಸುವುದಕ್ಕಾಗಿ ಈ ರೀತಿ ಉದ್ದೇಶಪೂರ್ವಕವಾಗಿ ಮಾಡಲಾಗಿದೆ’ ಎಂದರು. ‘ಸಂಭಲ್‌ನಲ್ಲಿ ನಡೆದಿರುವುದು ಬಿಜೆಪಿ ರಾಜ್ಯ ಸರ್ಕಾರದ ಪೂರ್ವನಿಯೋಜಿತ ಕೃತ್ಯ. ಚುನಾವಣೆಯಲ್ಲಿನ ಅಕ್ರಮಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡಲಾಗಿದೆ’ ಎಂದೂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT