ಲಖನೌ: ಉತ್ತರ ಪ್ರದೇಶದ ಪಿಲಿಭಿತ್ಜಿಲ್ಲೆಯ ಗ್ರಾಮವೊಂದಕ್ಕೆ ನುಗ್ಗಿದ ಹೆಣ್ಣು ಹುಲಿಯೊಂದನ್ನು ಗ್ರಾಮದ ಜನರು ಅಟ್ಟಾಡಿಸಿ ಹೊಡೆದು ಕೊಲ್ಲುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇಲ್ಲಿನ ಪಿಲಿಭಿತ್ ಹುಲಿ ಸಂರಕ್ಷಣಾ ವಲಯದಲ್ಲಿ ಬುಧವಾರ ಈ ಘಟನೆ ನಡೆದಿದೆ.ಮೊಬೈಲ್‌ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೊದಲ್ಲಿ ಮತೈನಾ ಗ್ರಾಮದ ಜನರು ಬಡಿಗೆಯಿಂದ ಹುಲಿಯೊಂದಕ್ಕೆ ಹೊಡೆಯುತ್ತಿರುವ ದೃಶ್ಯವಿದೆ. ಆ ದಿನ ಬೆಳಗ್ಗೆ ಇದೇ ಹುಲಿ ಅಲ್ಲಿನ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸದ್ದಕ್ಕಾಗಿ ಅದಕ್ಕೆ ಹೊಡೆಲಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೊದಲ್ಲಿ ಹೇಳುತ್ತಿರುವುದು ಕೇಳಿಸುತ್ತಿದೆ.

6 ವರ್ಷದ ಈ ಹುಲಿಯ ಎದೆಗೂಡು ಮುರಿದಿದೆ.ಮರಣೋತ್ತರ ಪರೀಕ್ಷೆ ನಂತರ ಇದನ್ನು ಹೂಳಲಾಯಿತು.ಹುಲಿಯನ್ನು ಹೊಡೆದು ಕೊಂದ 31 ಗ್ರಾಮಸ್ಥರ ವಿರುದ್ಧ ಅರಣ್ಯಾಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.