ಜೊರ್ಹಾತ್: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಬುಧವಾರ ಸುಮಾರು 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಡಿಕ್ಕಿ ಹೊಡೆದು ಸಂಭವಿಸಿದ ಅನಾಹುತದಲ್ಲಿ ಒಬ್ಬರು ಮೃತಪಟ್ಟು, ಇಬ್ಬರು ನಾಪತ್ತೆಯಾಗಿದ್ದಾರೆ. ಉಳಿದವರನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಸಫಲವಾಗಿದೆ.

ಡಿಕ್ಕಿ ಸಂಭವಿಸಿ ದೋಣಿ ಮುಳುಗುತ್ತಿರುವಾಗ ಜನ ಆತಂಕದಿಂದ, ಚೀರಾಡುತ್ತಾ ನದಿಗೆ ಹಾರಿರುವ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣವನ್ನು ತಲ್ಲಣಗೊಳಿಸಿದೆ.

ಬಿರುಕು ಬಿಟ್ಟು ಒಡೆದುಹೋಗುವ ದೋಣಿ ನೀರಿನಲ್ಲಿ ಮುಳುಗುವುದು, ಪ್ರಯಾಣಿಕರು ಕಿರುಚುತ್ತಾ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವುದು, ಮುಳುಗುತ್ತಿರುವ ದೋಣಿಯಿಂದ ಜಿಗಿಯುವುದು ದೃಶ್ಯದಲ್ಲಿದೆ.

ಜೋರ್ಹಾಟ್‌ನ ನಿಮತಿ ಘಾಟ್‌ನಲ್ಲಿ ಬುಧವಾರ ಸಂಭವಿಸಿದದುರ್ಘಟನೆಯಲ್ಲಿ 23 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.