ಕೋಲ್ಕತ್ತ: ಜೀವ ವಿಮೆ ಹಾಗೂ ವೈದ್ಯಕೀಯ ವಿಮಾ ಕಂತುಗಳ ಮೇಲೆ ವಿಧಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ರದ್ದು ಮಾಡಬೇಕು ಎಂಬ ಬೇಡಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿಮಾ ಕಂತುಗಳ ಮೇಲಿನ ಶೇ 18 ರಷ್ಟು ಜಿಎಸ್ಟಿಯನ್ನು ರದ್ದು ಮಾಡಬೇಕು ಎಂದು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳ ನಾಯಕರೂ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಮತಾ, 'ಜನರ ಆರೋಗ್ಯ ಸುಧಾರಣೆಗೆ ಅತ್ಯವಶ್ಯಕ ಎಂಬುದನ್ನು ಪರಿಗಣಿಸಿ ಜೀವ ವಿಮೆ ಮತ್ತು ವೈದ್ಯಕೀಯ ವಿಮಾ ಕಂತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯಬೇಕು ಎಂಬುದು ಭಾರತ ಸರ್ಕಾರಕ್ಕೆ ನಮ್ಮ ಬೇಡಿಕೆಯಾಗಿದೆ. ಜಿಎಸ್ಟಿಯು ಜನರ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ' ಎಂದು ಹೇಳಿದ್ದಾರೆ.

'ಸರ್ಕಾರವು ಜನವಿರೋಧಿ ಜಿಎಸ್ಟಿಯನ್ನು ಹಿಂಪಡೆಯದಿದ್ದರೆ ಬೀದಿಗಿಳಿಯುವುದು ನಿಶ್ಚಿತ' ಎನ್ನುವ ಮೂಲಕ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
.ಜೀವ ಮತ್ತು ವೈದ್ಯಕೀಯ ವಿಮಾ ಕಂತಿನ ಮೇಲಿನ GST ತೆಗೆದು ಹಾಕಲು ಗಡ್ಕರಿ ಮನವಿ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜುಲೈ 28ರಂದು ಪತ್ರ ಬರೆದಿರುವ ಗಡ್ಕರಿ, 'ಜೀವ ವಿಮಾ ಕಂತಿನ ಮೇಲೆ ತೆರಿಗೆ ವಿಧಿಸುವುದೆಂದರೆ ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸಿದಂತೆ. ಕುಟುಂಬಕ್ಕೆ ರಕ್ಷಣೆ ನೀಡಲು ಬದುಕಿನ ಅನಿಶ್ಚಿತತೆಗಳಿಗೆ ವಿಮೆಯನ್ನು ಖರೀದಿಸುವ ವ್ಯಕ್ತಿಯ ಮೇಲೆ ತೆರಿಗೆ ಹೇರುವುದು ಸರಿಯಲ್ಲ' ಎಂದು ಪ್ರತಿಪಾದಿಸಿದ್ದರು.

ಗಡ್ಕರಿ ಪತ್ರಕ್ಕೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರಾಯ್, ಆರ್ಜೆಡಿ ಸಂಸದ ಎ.ಡಿ.ಸಿಂಗ್ ಸೇರಿದಂತೆ ಇನ್ನಿತರ ನಾಯಕರು ಬೆಂಬಲ ಸೂಚಿಸಿದ್ದಾರೆ.

ತೆರಿಗೆ ನಿರ್ಧಾರಗಳನ್ನು ಕೈಗೊಳ್ಳುವ ಜಿಎಸ್ಟಿ ಮಂಡಳಿಯ ಸಭೆ ಇದೇ ತಿಂಗಳು ನಡೆಯಲಿದೆ. ಕಳೆದ ಸಭೆ ಜೂನ್ 22ರಂದು ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.