ನವದೆಹಲಿ: ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದೆ. ಅಲ್ಲದೆ ಸಂಸದೀಯ ಸಮಿತಿ ಮುಂದೆ ಹಾಜರಾಗದಂತೆ ಅವರನ್ನು ತಡೆಯುತ್ತಿರುವುದೇನು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
.ಪಿಎಸಿ ಮುಂದೆ ಹಾಜರಾಗದ ಮಾಧವಿ.
ಈ ಬಗ್ಗೆ ತಮ್ಮ ಹಾಗೂ ಪವನ್ ಖೇರಾ ನಡುವಿನ ಸಂಭಾಷಣೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಕೋಟ್ಯಂತರ ಜನರ ಹಣ ಅಪಾಯದಲ್ಲಿದೆ’ ಎಂದು ಹೇಳಿದ್ದಾರೆ.

ಕೊನೆ ಕ್ಷಣದ ತುರ್ತು ಎಂದು ಸಂಸತ್ನ ಸಾರ್ವಜನಿಕ ಲೆಕ್ಕ ಸಮಿತಿ ಮುಂದೆ ವಿಚಾರಣೆಗೆ ಗೈರಾದ ಬುಚ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಕೇಳಿದೆ. ಈ ವಿಡಿಯೊಗೆ ‘ಈ ವಂಚನೆ ಮಾಡುವ ಗುಂಪನ್ನು ರಕ್ಷಿಸುತ್ತಿರುವವರು ಯಾರು?’ ಎನ್ನುವ ಶೀರ್ಷಿಕೆ ನೀಡಲಾಗಿದೆ.
.ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ರಾಜೀನಾಮೆಗೆ ಆಗ್ರಹ: ಉದ್ಯೋಗಿಗಳ ಪ್ರತಿಭಟನೆ.
ಸಂಸತ್ನ ಲೆಕ್ಕ ಸಮಿತಿ ಮುಂದೆ ಹಾಜರಾಗಿ ಉತ್ತರಿಸಲು ಮಾಧವಿ ಬುಚ್ ಯಾಕೆ ಮುಂದಾಗುತ್ತಿಲ್ಲ? ಸಮಿತಿಯ ಮುಂದೆ ಹಾಜರಾಗದಂತೆ ಅವರನ್ನು ರಕ್ಷಿಸುವ ಯೋಜನೆಯ ಹಿಂದೆ ಯಾರಿದ್ದಾರೆ? ಸಣ್ಣ-ಮಧ್ಯಮ ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹೂಡಿಕೆಯನ್ನು ಅಪಾಯಕ್ಕೆ ಸಿಲುಕಿಸಲು ಮತ್ತು ಮೋದಿ ಹಾಗೂ ಅವರ ಆತ್ಮೀಯ ಸ್ನೇಹಿತ ಅದಾನಿಗೆ ಲಾಭದಾಯಕವಾಗಲು ಯೋಚಿಸಿದ ಪಿತೂರಿ ಇದಾ? ಎಂದು ಕಾಂಗ್ರೆಸ್ನ ಮಾಧ್ಯಮ ವಿಭಾಗ ಮುಖ್ಯಸ್ಥ ಪವನ್ ಖೇರಾ ವಿಡಿಯೊದಲ್ಲಿ ಪ್ರಶ್ನಿಸಿದ್ದಾರೆ.

ಚಿಲ್ಲರೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡುವ ಹೊಸ ಮಾರ್ಗಗಳನ್ನು ರೂಪಿಸಬೇಕು ಎಂದು ರಾಹುಲ್ ಗಾಂಧಿ ವಿಡಿಯೊದಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ ಭಾರತದ ಷೇರು ಮಾರುಕಟ್ಟೆಯನ್ನು ‘ಅಪಾಯದ ಸ್ಥಳ’ ಎಂದು ಟೀಕಿಸಿದ್ದಾರೆ.

ಪಕ್ಷದ ಸಂವಹನ ಪ್ರಚಾರ ಕಾರ್ಯಕ್ರಮದಲ್ಲಿ ಸಣ್ಣ ಹೂಡಿಕೆದಾರರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಅವರು ಖೇರಾಗೆ ಸಂಭಾಷಣೆ ವೇಳೆ ತಿಳಿಸಿದ್ದಾರೆ.
.ಹಿಂಡನ್ಬರ್ಗ್ ಸೆಬಿ ವಿಶ್ವಾಸಾರ್ಹತೆಯ ಮೇಲೆ ದಾಳಿ ನಡೆಸುತ್ತಿದೆ: ಬುಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.